ರಾಜ್ಯದಲ್ಲಿ ಫ್ರೀ ಬಸ್ ಸೇವೆ, ನಮ್ಮ ಸಂಸ್ಥೆಗಳ ಮೇಲೆ ಯಾವುದೇ ಹೊರೆಯಾಗಲ್ಲ: ರಾಮಲಿಂಗಾ ರೆಡ್ಡಿ

Public TV
1 Min Read
RAMALINGA REDDY

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ (Shakti Scheme) ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಉಚಿತ ಪ್ರಯಾಣ ಮಾಡುತ್ತಿರುವ ಮಹಿಳಾ ಪ್ರಯಾಣಿಕರು ಯೋಜನೆಯ ಬಗ್ಗೆ ಕೊಂಡಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದರು.

ಯೋಜನೆಯ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಹಿಳೆಯರಿಗೆ ಅನುಕೂಲ ಆಗಲಿ ಅಂತ ಈ ಯೋಜನೆ ಜಾರಿಗೆ ತಂದೆವು. ಅನುಕೂಲ ಆಗ್ತಿದೆ. ಧಾರ್ಮಿಕ ಕ್ಷೇತ್ರಗಳಿಗೆ ಒಟ್ಟಿಗೆ ಹೋಗ್ತಿದ್ದಾರೆ. ಅದಕ್ಕೆ ಕೆಲ ಬಸ್‍ಗಳು ರಶ್ ಆಗ್ತಿವೆ. 15 ದಿನದೊಳಗೆ ಒಂದು ಹಂತಕ್ಕೆ ಬರುತ್ತೆ ಎಂದ್ರು.

ksrtc free bus travel

ಶಾಲಾ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ಈ ಯೋಜನೆ ನೆರವಾಗಿವೆ. ಶಕ್ತಿ ಯೋಜನೆಯಿಂದ ನಮ್ಮ ಸಂಸ್ಥೆಗಳಿಗೆ ಯಾವುದೇ ಆರ್ಥಿಕ ಹೊರೆಯಾಗಲ್ಲ.  ಕೆಲವು ಬಸ್ ಗಳಲ್ಲಿ ನಕಲಿ ಆಧಾರ್ (Adhar Card) ತೋರಿಸಿ ಪ್ರಯಾಣ ಮಾಡ್ತಿರೋ ಬಗ್ಗೆಯೂ ಮಾತನಾಡಿದ ಸಚಿವರು, ನಮ್ಮ ಅಧಿಕಾರಿಗಳು ಅಲರ್ಟ್ ಆಗಿರಬೇಕು. ಅಕ್ರಮವಾಗಿ ನಕಲಿ ಮಾಡಿದ್ರ ಮೇಲೆ ದೂರು ನೀಡಿ, ಅವ್ರ ಮೇಲೆ ಕ್ರಮ ಆಗಬೇಕು ಅಂತ ನಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಬಡವರಿಗೆ ಕೇಂದ್ರದಿಂದ ದ್ರೋಹ – ಜೂ.20ಕ್ಕೆ ಕಾಂಗ್ರೆಸ್‌ನಿಂದ ರಾಜ್ಯವ್ಯಾಪಿ ಪ್ರತಿಭಟನೆ: ಡಿಕೆಶಿ

ತುಮಕೂರು (Tumakuru) ಘಟನೆಯ ಬಗ್ಗೆ ವರದಿ ತರಿಸಿಕೊಳ್ತೇನೆ: ತುಮಕೂರಿನ ಕೊರಟಗೆರೆಯ, ನಾಗೇನಹಳ್ಳಿಯ ಗೇಟ್ ಬಳಿ ಗುರುವಾರ ಸಂಜೆ, ಬಸ್ ಗಾಗಿ ಕೈ ಅಡ್ಡ ಹಾಕಿದ್ದ ಮಹಿಳೆಯರ ಮೇಲೆ ಬಸ್ ಹತ್ತಿಸಲು ಯತ್ನಿಸಿದ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವರು ಘಟನೆಯ ಬಗ್ಗೆ ವರದಿ ತರಿಸಿಕೊಳ್ತೇನೆ ಎಂದಿದ್ದಾರೆ.

ತಪ್ಪು ಕಂಡು ಬಂದ್ರೆ ಕ್ರಮ ಆಗುತ್ತೆ. ಒಬ್ಬರು, ಇಬ್ಬರು ಮಾಡೋದ್ರಿಂದ ಸಂಸ್ಥೆಗೆ ಕೆಟ್ಟ ಹೆಸ್ರು ಬರುತ್ತೆ. ಮಧ್ಯಾಹ್ನ ಇವತ್ತು ಅಧಿಕಾರಿಗಳ ಜೊತೆ ಮಾತನಾಡ್ತೇನೆ. ಬಸ್ ನಿಲ್ಲಿಸದೇ, ಜನರ ಜೊತೆ ಅನುಚಿತ ವರ್ತನೆ ಮಾಡಿದ್ರೆ ಕ್ರಮ ತೆಗೆದುಕೊಳ್ಳಲಾಗುತ್ತೆ. ಎಲ್ಲ ಎಂಡಿಗಳಿಗೆ ಸೂಚನೆ ನೀಡಿದ್ದೇನೆ. ರ್ಯಾಷ್ ಡ್ರೈವ್ ಮಾಡಿದ್ರೂ ಕ್ರಮ ತೊಗೊಳ್ಳಿ ಅಂತ ಹೇಳಿದ್ದೇನೆ ಎಂದರು.

Share This Article