ನಾಳೆ ಮಂಡ್ಯದಲ್ಲಿ (Mandya) ಅಂಬಿ ಕುಟುಂಬ ಬೀಗರೂಟವನ್ನು ಆಯೋಜನೆ ಮಾಡಿದೆ. ಬೀಗರೂಟಕ್ಕೆ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಸಿದ್ದತೆಯನ್ನು ಪರಿಶೀಲಿಸಲು ಅಭಿಷೇಕ್ ಅಂಬರೀಶ್ (Abhishek) ಇಂದು ಮಂಡ್ಯಗೆ ಆಗಮಿಸಿದ್ದರು. ಪರಿಶೀಲನೆ ಮುಗಿಸಿ ಮಂಡ್ಯದಲ್ಲಿಯ ಮಹಾವೀರ ವೃತ್ತದಲ್ಲಿರುವ ಟೀ ಅಂಗಡಿಯಲ್ಲಿ ಚಹಾ (Tee) ಕುಡಿದ ಸಂಭ್ರಮಿಸಿದರು ಯಂಗ್ ರೆಬಲ್ ಸ್ಟಾರ್. ತಮ್ಮ ಕುಟುಂಬದ ಅತ್ಯಾಪ್ತ ಇಂಡುವಾಳು ಸಚ್ಚಿದಾನಂದ ಜೊತೆಗೆ ಆಗಮಿಸಿದ್ದ ಅಭಿ, ಕೆಲ ಹೊತ್ತು ಅಂಗಡಿಯಲ್ಲಿ ಕಾಲ ಕಳೆದರು.
ಅಂಬರೀಶ್ (Ambarish) ಅವರು ಮಂಡ್ಯಗೆ ಬಂದಾಗ ಹೀಗೆಯೇ ಮಾಡುತ್ತಿದ್ದರಂತೆ. ಯಾವುದೋ ಟೀ ಅಂಗಡಿ, ಇನ್ನ್ಯಾವುದೋ ಹೋಟೆಲ್ ಹೊಕ್ಕು ಖುಷಿ ಖುಷಿಯಾಗಿ ತಿಂದು ಹೋಗುತ್ತಿದ್ದರಂತೆ. ಅಭಿಷೇಕ್ ಕೂಡ ತಂದೆಯಂತೆಯೇ ಎಲ್ಲರೊಂದಿಗೆ ಬರೆಯುತ್ತಿದ್ದಾರೆ. ಹಾಗಾಗಿ ಥೇಟ್ ಅಂಬಿಯನ್ನೇ ಅಭಿಷೇಕ್ ಗುಣದಲ್ಲಿ ಹೋಲುತ್ತಿದ್ದಾರೆ ಎನ್ನುತ್ತಾರೆ ಅಭಿಮಾನಿಗಳು. ಇದನ್ನೂ ಓದಿ:ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್
ಮಂಡ್ಯ ಜಿಲ್ಲೆಯ ಮದ್ದೂರು ಸಮೀಪದ ಗೆಜ್ಜಲಗೆರೆ ಕಾಲೋನಿ ಬಳಿಯ 15 ಎಕರೆ ಪ್ರದೇಶದಲ್ಲಿ ಈ ಬೀಗರ ಔತಣಕೂಟ (Beegaruta) ನಡೆಯಲಿದೆ. ಈ ಬೀಗರ ಊಟಕ್ಕೆ ಸುಮಾರು 50 ಸಾವಿರ ಜನರು ಆಗಮಿಸಿವ ನಿರೀಕ್ಷೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಕುಟುಂಬಸ್ಥರು ಇದ್ದಾರೆ. ಹೀಗಾಗಿ ವಿಶಾಲ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡಲು ಆಸನದ ವ್ಯವಸ್ಥೆ ಮಾಡಲಾಗಿದೆ. ಅಭಿಷೇಕ್ ಅವಿವಾ ಅವರ ಮಂಡ್ಯದ ಬೀಗರ ಔತಣಕೂಟಕ್ಕೆ ರಾಜಕೀಯ ಹಾಗೂ ಸಿನಿಮಾ ರಂಗದ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದ್ದು ಹೀಗಾಗಿ ವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ನಾಳೆ ಬೆಳಿಗ್ಗೆ 11:30ರಿಂದ ಆರಂಭವಾಗಲಿರುವ ಔತಣಕೂಟದಲ್ಲಿ 5-6 ಟನ್ ಮಟನ್, 7 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟ ತಯಾರಿ ಮಾಡಲಾಗುತ್ತದೆ. ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಯಾಗಲಿದ್ದು ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದಿಂದ ಅಡುಗೆ ತಯಾರಿ ಕಾರ್ಯ ಇಂದು ರಾತ್ರಿಯಿಂದಲೇ ನಡೆಯುತ್ತದೆ. ಬೀಗರ ಔತಣಕೂಟ ಮೆನು ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ಮಟನ್, ಎರಡು ಬಗೆಯ ಚಿಕನ್, ಮೊಟ್ಟೆ, ರೈಸ್, ತಿಳಿಸಾಂಬಾರ್, ಬೀಡಾ, ಐಸ್ ಕ್ರೀಂ, ಬಾಳೆಹಣ್ಣು ಇರಲಿದೆ.