ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್

Public TV
1 Min Read
radhika pandit

ಕೆಜಿಎಫ್, ಕೆಜಿಎಫ್ 2 (KGF 2) ಸಿನಿಮಾ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಕನ್ನಡದ ಸಿನಿಮಾಗಳಿಗೆ ಸೀಮಿತವಾಗದೇ ದೇಶದ ಎಲ್ಲೆಡೆ ಸಂಚಲನ ಮೂಡಿಸಿದ್ದಾರೆ. ಇದೀಗ ಯಶ್ (Yash) ಮನೆಗೆ ಹೊಸ ಕಾರು ಎಂಟ್ರಿ ಕೊಟ್ಟಿದೆ. ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಸಿನಿಮಾದ ಸಕ್ಸಸ್ ಬಳಿಕ ಐಷಾರಾಮಿ ಕಾರೊಂದನ್ನ ಖರೀದಿಸಿದ್ದಾರೆ.

radhika pandit 1

ನ್ಯಾಷನಲ್ ಸ್ಟಾರ್ ಯಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕಪ್ಪು ಬಣ್ಣದ ರೇಂಜ್ ರೋವರ್ (Range Rover Car) ಸ್ಪೆಷಲ್ ಎಡಿಷನ್ ಕಾರನ್ನ ಕೊಂಡುಕೊಂಡಿದ್ದಾರೆ. ಈ ಮೂಲಕ ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

radhika pandit 2

ಪೂಜೆಯ ಬಳಿಕ ಪತ್ನಿ ರಾಧಿಕಾ (Radhika Pandit) ಮತ್ತು ಮಕ್ಕಳ ಜೊತೆ ಕಾರಿನಲ್ಲಿ ಯಶ್ ಸುತ್ತಾಡಿದ್ದಾರೆ. ಬಳಿಕ ಮಕ್ಕಳೊಂದಿಗೆ ಕಾರಿನ ಜೊತೆ ಯಶ್ ದಂಪತಿ ಪೋಸ್ ನೀಡಿದ್ದಾರೆ. ಯಶ್ ಬ್ರೌನ್ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದರೆ, ನಟಿ ರಾಧಿಕಾ ಲೈಟ್ ಬಣ್ಣದ ಟಾಪ್ ಧರಿಸಿದ್ದಾರೆ.

ರಾಕಿಭಾಯ್ ಖರೀದಿಸಿರುವ ಕಾರು ರೇಂಜ್ ರೋವರ್‌ಗೆ 5 ಕೋಟಿ ರೂ. ಬೆಲೆಯದಾಗಿದೆ. ಎಲ್ಲಾ ಸೌಕರ್ಯಗಳಿರುವ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ದುಬಾರಿ ಕಾರಿನ ಜೊತೆಯಿರುವ ಯಶ್ ದಂಪತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಈ ವಿಚಾರಕ್ಕೆ ನಟನೆಗೆ ಗುಡ್ ಬೈ ಹೇಳ್ತಾರಾ ‌’ಮಗಧೀರ’ ನಟಿ ಕಾಜಲ್?‌

ಇನ್ನೂ ಯಶ್ ನಟನೆಯ ಮುಂದಿನ ಸಿನಿಮಾ ಬಗ್ಗೆ ಯಾವುದು ಅಪ್‌ಡೇಟ್ ಸಿಗದೇ ಫ್ಯಾನ್ಸ್ ಕಂಗಲಾಗಿದ್ದಾರೆ. ರಾಕಿ ಭಾಯ್ 19ನೇ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸ್ವತಃ ಯಶ್ ಅನೌನ್ಸ್ ಮಾಡುವವರೆಗೂ ಕಾದುನೋಡಬೇಕಿದೆ.

Share This Article