ಡೇರ್ ಡೆವಿಲ್ ಮುಸ್ತಾಫಾಗೆ ತೆರಿಗೆ ವಿನಾಯಿತಿ ನೀಡಿದ ಸಿಎಂ ಸಿದ್ದರಾಮಯ್ಯ

Public TV
3 Min Read
Dare Devil Mustafa 1

ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ‘ಡೇರ್ ಡೆವಿಲ್ ಮುಸ್ತಾಫಾ’ ಕೃತಿ ಆಧರಿಸಿದ ಶಶಾಂಕ್ ನಿರ್ದೇಶನದ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಚಿತ್ರತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಈ ಹಿಂದೆ ಮನವಿ ಸಲ್ಲಿಸಿತ್ತು. ಚಿತ್ರತಂಡದ ಮನವಿಯನ್ನು ಪುರಸ್ಕರಿಸಿರುವ ಸರಕಾರ, ಚಿತ್ರಕ್ಕೆ ರಿಯಾಯಿತಿ ನೀಡಿದೆ.

Dare Devil Mustafa 2

ತೆರಿಗೆ ವಿನಾಯಿತಿ (Tax Exemption) ನೀಡಿದರೆ, ಸಿನಿಮಾ ಮತ್ತಷ್ಟು ಜನರಿಗೆ ತಲುಪಲು ಸಾಧ್ಯವಾಗಬಹುದು ಹಾಗೂ ಕಡಿಮೆ ದರದಲ್ಲಿ ಚಿತ್ರ ತೋರಿಸಲು ಉತ್ಸಾಹ ಬರಬಹುದು ಎಂದು ಈ ಸಂದರ್ಭದಲ್ಲಿ ಚಿತ್ರತಂಡ ಹೇಳಿಕೊಂಡಿತ್ತು.  ಚಿತ್ರಕಥಾ ಲೇಖಕ ಅನಂತ್, ನಿರ್ದೇಶಕ ಶಶಾಂಕ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ಸೇರಿದಂತೆ ಹಲವರು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ಎಲ್ಲರ ಮನವಿಗೆ ಸಿಎಂ ಸ್ಪಂದಿಸಿದ್ದಾರೆ. ಇದನ್ನೂ ಓದಿ:ಮಾಡ್ರನ್ ಅವತಾರ ಬದಿಗಿಟ್ಟು ಲೆಹೆಂಗಾದಲ್ಲಿ ಮಿಂಚಿದ ‘ಪುಟ್ಟಗೌರಿ’- ಸೊಂಟ ಸೂಪರ್ ಎಂದ ನೆಟ್ಟಿಗರು

Daredevil Mustafa 1

ಚಿತ್ರದ ಗೆಲುವಿಗೆ ಚಿತ್ರತಂಡ ಹೇಳಿದ್ದೇನು?

ಕಂಟೆಂಟ್ ಆಧಾರಿತ ಒಳ್ಳೆಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕಪ್ರಭು ಯಾವತ್ತೂ ಕೈ ಬಿಡೋದಿಲ್ಲ ಎಂಬ ನಂಬಿಕೆ ಗಾಂಧಿನಗರದಲ್ಲಿದೆ. ಇದು ಡೇರ್ ಡೆವಿಲ್ ಮುಸ್ತಾಫಾ (Dare devil Mustafa) ಸಿನಿಮಾ ವಿಚಾರದಲ್ಲಿ ಪ್ರೂವ್ ಆಗಿದೆ. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ (Poorchandra Tejaswi) ಕಥೆಯಾಧಾರಿತ ಸಿನಿಮಾವಾಗಿರುವ ಡೇರ್ ಡೆವಿಲ್ ಮುಸ್ತಾಫಾ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ಪ್ರೇಮಿಗಳಿಂದ ಹಾಗೂ ವಿಮರ್ಶಕರಿಂದಲೂ ಅಪ್ಪುಗೆ ಪಡೆದಿರುವ ಹೃದಯ ಬೆಸೆಯುವ ಕಥೆ ಯಶಸ್ವಿಯಾಗಿ ಹಲವು  ವಾರಗಳ ಪ್ರದರ್ಶನ ಕಂಡಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಯಶಸ್ವಿ ಕಾರ್ಯಕ್ರಮ ಆಯೋಜಿಸಿತ್ತು. ಕೇಕ್ ಕಟ್ ಮಾಡಿ ಸಕ್ಸಸ್ ಖುಷಿಯನ್ನು ಮಾಧ್ಯಮದವರ ಜೊತೆ ಹಂಚಿಕೊಂಡರು.

Daredevil Mustafa 4

ಡಾಲಿ ಧನಂಜಯ್ (Dolly Dhananjay) ಮಾತನಾಡಿ, ನಾನು ಇಲ್ಲಿ ಕುಳಿತು ಈ ಗೆಲುವನ್ನು ಸಂಭ್ರಮವನ್ನು ನೋಡಲು ಬಂದೆ. ನಾನು ಮಾತನಾಡುವುದು ಏನು ಇಲ್ಲ. ಎಲ್ಲಾ ಸಿನಿಮಾಗಳಲ್ಲಿಯೂ ದುಡ್ಡು ಇರುವುದಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ರಿಲೀಸ್ ಗೆ ಮಾತ್ರ ಸಿನಿಮಾಗಳು ಖರ್ಚು ಮಾಡಲು ಆಗುವುದಿಲ್ಲ. ಮಾಧ್ಯಮದವರು ಸಿನಿಮಾ ಜೊತೆಗೆ ನಿಂತಿದ್ದೀರಾ. contribution is the greatest philosophy ಎಂಬುದನ್ನು ನಾನು ನಂಬಿದ್ದೇನೆ. ಒಳ್ಳೆದು ಏನೂ ಆಗುತ್ತಿದೆ ಎಂದಾಗ ನಾವು ಅದರ ಭಾಗವಾಗುವುದು ತುಂಬಾ ಮುಖ್ಯ. ಪೂರ್ಣಚಂದ್ರ ತೇಜಸ್ವಿ ಅವರನ್ನು ಸೆಲೆಬ್ರೆಟ್ ಮಾಡಲು ಸಿಕ್ಕ ಅವಕಾಶ. ನನ್ನ ಕಟೌಟ್ ಮುಂದೆ ಕುಣಿದಾಗಲು ಇಷ್ಟು ಖುಷಿ ಕೊಟ್ಟಿರಲಿಲ್ಲ. ಅಷ್ಟೊಂದು ಖುಷಿ ಪೂರ್ಣಚಂದ್ರ ತೇಜಸ್ವಿ ಕಟೌಟ್ ಮುಂದೆ ಕುಣಿದಾಗ ಸಿಕ್ಕಿದೆ ಎಂದು ತಿಳಿಸಿದರು.

Daredevil Mustafa 3

ನಿರ್ದೇಶಕ ಶಶಾಂಕ್ ಸೋಗಲ್ (Shashank Sogal)  ಮಾತನಾಡಿ, ಒಳ್ಳೆ ಸಿನಿಮಾ ಮಾಡಬೇಕು ಅಂತ ಫೋಕಸ್ ಮಾಡಿದ್ದೆ. ಎಂಜಿನಿಯರಿಂಗ್ ಓದುವಾಗ ಕನ್ನಡ ಸಿನಿಮಾ ಹೋಗ್ತೀವೆ ಎಂದಾಗ ನಮ್ಮನ್ನು ಬೇರೆ ರೀತಿ ನೋಡುವವರು. ಆಗ ತುಂಬಾ ಕೋಪ ಬರುವುದು. ಒಳ್ಳೆ ಸಿನಿಮಾ ಮಾಡಬೇಕು ಎಂಬ ಒಂದೆ ಉದ್ದೇಶವಿತ್ತು. ಮಾಡಿದ್ದೇನೋ ಇಲ್ವೋ ಗೊತ್ತಿಲ್ಲ. ಜನ ಸ್ವೀಕರಿಸಿದ್ದಾರೆ ಎಂದರೆ ಅದು ಒಳ್ಳೆ ಕೃತಿಯಾಗಿದೆ ಎಂದು ತಿಳಿದುಕೊಳ್ಳುತ್ತೇನೆ. ಆ ಒಂದೊಳ್ಳೆ ಉದ್ದೇಶದಿಂದ ಎಷ್ಟು ಒಳ್ಳೆ ಸ್ನೇಹಿತರು ಸಿಕ್ಕಿದ್ದಾರೆ. ಸಿನಿಮಾಗೆ ಎಲ್ಲೆಡೆಯಿಂದ ರೆಸ್ಪಾನ್ಸ್ ಸಿಗುತ್ತಿದೆ. ಧನಂಜಯ್ ಸರ್ ನಮ್ಮ ಸಿನಿಮಾಗೆ ಸಪೋರ್ಟ್ ಮಾಡಿರುವುದು. ಜನಕ್ಕೆ ರೀಚ್ ಆಗುತ್ತಿರುವುದು ಖುಷಿಕೊಟ್ಟಿದೆ. ವೀಕೆಂಡ್ ನಲ್ಲಿ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಹೊರ ದೇಶದಲ್ಲಿಯೂ ಈ ಕಥೆಯನ್ನು ಮೆಚ್ಚಿಕೊಂಡಿದ್ದಾರೆ ಎಂದರು.

Daredevil Mustafa 2

ರಾಮಾನುಜ ಅಯ್ಯಂಗಾರಿ ಪಾತ್ರಧಾರಿ ಆದಿತ್ಯ ಅಶ್ರೀ, ರಾಮಾನುಜ ಅಯ್ಯಂಗಾರಿ ಪಾತ್ರದ ಮೇಲೆ ಪ್ರೀತಿ ಸಿಟ್ಟು ಎಲ್ಲದನ್ನೂ ಮಾಡಿಕೊಂಡಿದ್ದಾರೆ. ಸಿನಿಮಾ ನೋಡಿದ ಮೇಲೆ ಎಲ್ಲರೂ ಎತ್ತಿ ಕೊಂಡಾಡುತ್ತಿದ್ದೀರಾ. 18 ವರ್ಷಕ್ಕೆ ಇಂಡಸ್ಟ್ರೀಗೆ ಬಂದೆ. ಎಷ್ಟೋ ಅವಮಾನ, ಕಾಯುವಿಕೆ ಬಳಿಕ ಒಂದೊಳ್ಳೆ ಪಾತ್ರ ಸಿಕ್ಕಿದೆ. ಜನ ಗುರುತಿಸುತ್ತಿದ್ದಾರೆ. ಈ ಸಿನಿಮಾದಿಂದ ಇನ್ನೊಂದು ಚಿತ್ರದಲ್ಲಿ ನಾಯಕ ನಟಿಸುವ ಅವಕಾಶ ಪಡೆದಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದರು.

 

ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.

Share This Article