ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಅವರು ಸಾಕಷ್ಟು ವಿಭಿನ್ನ ಪಾತ್ರಗಳ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ಮನೋಜ್ಞ ನಟನೆಗೆ ಬಿಟೌನ್ ಭೇಷ್ ಎಂದಿದ್ದು ಇದೆ. ಈಗ ‘ಟೀಕು ವೆಡ್ಸ್ ಶೇರು’ (Tiku Weds Sheru) ಚಿತ್ರದ ಮೂಲಕ ಸದ್ದು ಮಾಡ್ತಿರೋ ನವಾಜುದ್ದೀನ್ ಮೇಲೆ ಅಭಿಮಾನಿಗಳು ಕಿಡಿಕಾರಿದ್ದಾರೆ. ಮಗಳ ವಯಸ್ಸಿನ ಹುಡುಗಿ ಜೊತೆ ರೊಮ್ಯಾನ್ಸ್, ಮತ್ತು ಲಿಪ್‌ಲಾಕ್ ಮಾಡಿರೋ ನವಾಜುದ್ದೀನ್‌ಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
ನವಾಜುದ್ದೀನ್ ಸಿದ್ಧಿಕಿ ಅವರು ಇತ್ತೀಚಿಗೆ ತಮ್ಮ ವೈಯಕ್ತಿಕ ವಿಷ್ಯವಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಕುಟುಂಬಿಕ ಕಲಹ ಬೀದಿಯಲ್ಲಿ ರಂಪಾಟ ಆಗುತ್ತಿದೆ. ಇದರ ನಡುವೆ ಅವರ ನಟನೆಯ ಸಿನಿಮಾದ ಟ್ರೈಲರ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ‘ಟೀಕು ವೆಡ್ಸ್ ಶೇರು’ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನವಾಜುದ್ದೀನ್ ಅವರು ಶೇರು ಎಂಬ ಜ್ಯೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಸೆಟ್ಲ್ ಆಗಬೇಕು ಎಂಬುದು ಶೇರು ಕನಸಾಗಿರುತ್ತದೆ. ಟೀಕು (ಅವ್ನೀತ್) ಕೂಡ ಹೀರೋಯಿನ್ ಆಗಬೇಕು ಎಂದು ಕನಸು ಕಂಡವಳು. ಶೇರುನ ಮದುವೆ ಆದರೆ ಭೋಪಾಲ್ ಬಿಟ್ಟು ಮುಂಬೈ ಸೇರಬಹುದು, ಸಿನಿಮಾ ಆಫರ್ ಪಡೆಯಬಹುದು ಎಂಬುದು ಟೀಕು ಆಲೋಚನೆ. ಈ ಕಾರಣಕ್ಕೆ ಆಕೆ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಇದು ಟ್ರೈಲರ್‌ನಲ್ಲಿ ತೋರಿಸಿರುವ ಅಂಶವಾಗಿದೆ. ಇದನ್ನೂ ಓದಿ:ಮಾಡ್ರನ್ ಅವತಾರ ಬದಿಗಿಟ್ಟು ಲೆಹೆಂಗಾದಲ್ಲಿ ಮಿಂಚಿದ ‘ಪುಟ್ಟಗೌರಿ’- ಸೊಂಟ ಸೂಪರ್ ಎಂದ ನೆಟ್ಟಿಗರು
ನವಾಜುದ್ದೀನ್, ಅವ್ನೀತ್ ಕೌರ್ ಲಿಪ್ ಲಾಕ್ ದೃಶ್ಯ ಇದೆ. ನವಾಜುದ್ದೀನ್ ವಯಸ್ಸು 49. ಅವ್ನೀತ್‌ಗೆ 21 ವರ್ಷ. ಮಗಳ ವಯಸ್ಸಿನ ಹುಡುಗಿಯ ಜೊತೆ ನವಾಜುದ್ದೀನ್ ಲಿಪ್ ಲಾಕ್ ಮಾಡಿದ್ದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆಯಾಗಿದೆ. ಈ ಬಗ್ಗೆ ಸಾಕಷ್ಟು ಟೀಕೆ ಕೇಳಿ ಬಂದಿದೆ. 21 ವರ್ಷದ ಯುವತಿ ಜೊತೆ ರೊಮ್ಯಾನ್ಸ್ ಮಾಡೋ ಅವಶ್ಯಕತೆ ಇದ್ಯಾ.? ಇಬ್ಬರಿಗೂ ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ ಅಂತಾ ಸಿನಿಮಾ ತಂಡಕ್ಕೂ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಟೀಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಓಟಿಟಿ ಮೂಲಕ ಈ ಸಿನಿಮಾ ಜೂನ್ 23ರಂದು ರಿಲೀಸ್ ಆಗಲಿದೆ.
ನಟ ನವಾಜುದ್ದೀನ್ ಬಾಲಿವುಡ್‌ನ ಖ್ಯಾತ ನಟ, ವಿಭಿನ್ನ ಪಾತ್ರ, ಕಥೆಯ ಮೂಲಕ ಬಿಟೌನ್‌ನಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ರಿಲೀಸ್‌ಗಿರೋ ‘ಟೀಕು ವೆಡ್ಸ್ ಶೇರು’ ಅದೆಷ್ಟರ ಮಟ್ಟಿಗೆ ಸಿನಿಮಾ ಸೌಂಡ್ ಮಾಡುತ್ತೆ ಅಂತಾ ಕಾದುನೋಡಬೇಕಿದೆ.