140 ಕೋಟಿ ಜನರ ಖಾಸಗಿತನದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ – ಮಲ್ಲಿಕಾರ್ಜುನ ಖರ್ಗೆ ಕಿಡಿ

Public TV
2 Min Read
Mallikarjun Kharge 2

ನವದೆಹಲಿ: ಕೊವೀನ್ ಆ್ಯಪ್ (CoWIN App) ಮೂಲಕ ಸಾರ್ವಜನಿಕರ ಮಾಹಿತಿ ಸೋರಿಕೆಯಾಗಿದ್ದು, ಸರ್ಕಾರ ಎಷ್ಟೆ ಮುಚ್ಚಿಟ್ಟರೂ ದೇಶದಲ್ಲಿ ಸಾರ್ವಜನಿಕರ ವೈಯಕ್ತಿಕ ಡೇಟಾ ಸುರಕ್ಷಿತವಾಗಿಲ್ಲ ಎಂಬುದು ದತ್ತಾಂಶಗಳಿಂದ ಸಾಬೀತಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಸರ್ಕಾರ ಮಾಹಿತಿಯನ್ನು ಎಷ್ಟೇ ಮುಚ್ಚಿಟ್ಟರೂ 3 ಅಂಶಗಳು ಸ್ಪಷ್ಟವಾಗಿವೆ. ದೇಶದಲ್ಲಿ ಸಾರ್ವಜನಿಕರ ವೈಯಕ್ತಿಕ ದತ್ತಾಂಶ (Personal Data) ಸುರಕ್ಷಿತವಾಗಿಲ್ಲ, ಇದಕ್ಕಾಗಿಯೇ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಿದ ಸುಪ್ರೀಂ ಕೋರ್ಟ್ (Supreme Court) ಅನ್ನು 2017 ರಲ್ಲಿ ಮೋದಿ ಸರ್ಕಾರ ಹೇಗೆ ಬಲವಾಗಿ ವಿರೋಧಿಸಿತು ಎಂದು ವಾಗ್ದಾಳಿ ನಡೆಸಿದ್ದಾರೆ.

NARENDRA MODI 3

ದೇಶದಲ್ಲಿ ಸೈಬರ್ ದಾಳಿಗಳು (Cyber Attack) ಮತ್ತು ಡೇಟಾ ಸೋರಿಕೆಗಳು ನಿರಂತರವಾಗಿ ಹೆಚ್ಚುತ್ತಿವೆ. 2018ರ ವಿಶ್ವದ ಅತಿದೊಡ್ಡ ಆಧಾರ್ ಡೇಟಾ ಉಲ್ಲಂಘನೆಯಾಗಿರಬಹುದು ಅಥವಾ ನವೆಂಬರ್ 2022ರ AIIMS ಮೇಲೆ ಸೈಬರ್ ದಾಳಿಯಾಗಿರಬಹುದು. 13 ಅಡಿ ಎತ್ತರ ಮತ್ತು 5 ಅಡಿ ದಪ್ಪದ ಗೋಡೆಗಳಲ್ಲಿ ಆಧಾರ್ ಡೇಟಾವನ್ನು (Aadhar Data) ರಕ್ಷಿಸಲಾಗಿದೆ ಎಂದು ಮೋದಿ ಸರ್ಕಾರ ಸೆಪ್ಟೆಂಬರ್ 2018 ರಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಆ ನಂತರವೂ ದೇಶದಲ್ಲಿ ಸೈಬರ್ ದಾಳಿಗಳು ಹಲವು ಪಟ್ಟು ಹೆಚ್ಚಿವೆ. 2018 ರಲ್ಲಿ 2.08 ಲಕ್ಷ, 2019 ರಲ್ಲಿ 3.94 ಲಕ್ಷ, 2020 ರಲ್ಲಿ 11.58 ಲಕ್ಷ, 2021 ರಲ್ಲಿ 14.02 ಲಕ್ಷ, 2022 ರಲ್ಲಿ 13.91 ಲಕ್ಷ ಸೈಬರ್ ದಾಳಿಗಳು ವರದಿಯಾಗಿವೆ. ಒಟ್ಟಾರೆ 140 ಕೋಟಿ ಜನರ ಖಾಸಗಿತನದ ಮೂಲಭೂತ ಹಕ್ಕಿನ ಬಗ್ಗೆ ಮೋದಿ ಸರ್ಕಾರಕ್ಕೆ ಕಾಳಜಿ ಇಲ್ಲ, ರಾಷ್ಟ್ರೀಯ ಭದ್ರತೆಯ ಬಗ್ಗೆ ಕಾಳಜಿ ಇಲ್ಲ ಎಂದು ಖರ್ಗೆ ಟ್ವಿಟರ್‌ನಲ್ಲಿ ಕಿಡಿ ಕಾರಿದ್ದಾರೆ.

Share This Article