ಮೈಸೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಸಚಿವರ ಪುತ್ರ ತಾನೇ ಮುಂದೆ ನಿಂತು ಚಾಲನೆ ನೀಡಿದ್ದು, ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಶಾಸಕ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ (K Venkatesh) ಅವರ ಪುತ್ರ ತಮ್ಮ ತಂದೆಯ ಅನುಪಸ್ಥಿತಿಯಲ್ಲಿ ಸರ್ಕಾರದ ಶಕ್ತಿ ಯೋಜನೆಗೆ Shakti Scheme) ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್ – ಓಲಾ, ಊಬರ್‌ಗೂ ತಟ್ಟಿದ ಬಿಸಿ
ಪಿರಿಯಾಪಟ್ಟಣದಲ್ಲಿ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವರ ಪುತ್ರ ನಿತಿನ್ ವೆಂಕಟೇಶ್ ಅವರ ದರ್ಬಾರ್ ನಡೆದಿದೆ. ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂದೆ ಅನುಪಸ್ಥಿತಿಯಲ್ಲಿ ತಾನೇ ಮುಂದೆ ನಿಂತು ಶಕ್ತಿಯೋಜನೆಗೆ ಚಾಲನೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಇದನ್ನೂ ಓದಿ: ‘ಶಕ್ತಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್- ಮೊದಲ ದಿನವೇ 5.71 ಲಕ್ಷ ಮಹಿಳೆಯರ ಸಂಚಾರ