ರಾಧಿಕಾ ಕುಮಾರಸ್ವಾಮಿ ಜೊತೆ ‘ಲಚ್ಚಿ’ ಫೋಟೋ- ಕಿರುತೆರೆಗೆ ಮರಳಿದ್ರಾ ನಟಿ?

Public TV
1 Min Read
radhika kumarswamy

ಳು ಭಾಷೆಯಲ್ಲಿ ಸಿದ್ಧವಾಗುತ್ತಿರುವ ‘ಅಜಾಗ್ರತ’ ಚಿತ್ರಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ (Radhika Kumarswamy) ನಾಯಕಿಯಾಗಿದ್ದು, ರಾಧಿಕಾ ಸಹೋದರ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಈ ನಡುವೆ ನಟಿ ರಾಧಿಕಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟಿ ಶುಭಸುದ್ದಿ ನೀಡಿದ್ದಾರೆ.

radhika kumaraswamy 3

ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ (Shreyas Talpade) ಅವರಿಗೆ ನಾಯಕಿಯಾಗಿ ರಾಧಿಕಾ ಅವರು ಕಾಣಿಸಿಕೊಳ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್‌ನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ‘ದಮಯಂತಿ’ ಚಿತ್ರದ ಬಳಿಕ ನಟಿ ಬ್ರೇಕ್ ತೆಗೆದುಕೊಂಡಿದ್ದರು. ಈಗ ‘ಭೈರಾದೇವಿ’ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

radhika kumaraswamy 1

ಇದೀಗ ‘ನಮ್ಮ ಲಚ್ಚಿ’ (Namma Lacchi) ಸೀರಿಯಲ್ ಖ್ಯಾತಿಯ ಲಚ್ಚಿ ಮತ್ತು ರಿಯಾ ಇಬ್ಬರು, ರಾಧಿಕಾ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತ ಫೋಟೋವನ್ನ ಬಾಲನಟಿ ಲಚ್ಚಿ ಅಲಿಯಾಸ್ ಸಾಂಘವಿ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

radhika kumarswamy

ಈ ಹಿಂದೆ ಡ್ಯಾನ್ಸಿಂಗ್ ಶೋವೊಂದರಲ್ಲಿ ನಟಿ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದರು. ಈಗ ಸದ್ದಿಲ್ಲದೇ ಲಚ್ಚಿ ಸೀರಿಯಲ್‌ಗೆ ಸಾಥ್ ನೀಡಿದ್ರಾ.? ಅತಿಥಿಯಾಗಿ ಎಂಟ್ರಿ ಕೊಟ್ರಾ ಎಂಬ ಕುತೂಹಲ ಮೂಡಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ.? ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ:ಚಿತ್ರ ನಿರ್ಮಾಣಕ್ಕೆ ಮುಂದಾದ ಬಾಲಿವುಡ್ ನಟಿ ಕೃತಿ ಸನೋನ್

ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ನಟಿಸುತ್ತಿರುವ ʼಅಜಾಗ್ರತ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನೆರವೇರಿದೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ.ಎಂ.ರತ್ನಂ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರೆ, ಹೆಸರಾಂತ ವಿತರಕ ಟ್ಯಾಗೋರ್ ಮಧು ಕ್ಯಾಮೆರಾ ಚಾಲನೆ ಮಾಡಿದ್ದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದರು.

Share This Article