‘ಶಕ್ತಿ’ ಯೋಜನೆಯ ಮಹಿಳೆಯರ ಉಚಿತ ಟಿಕೆಟ್‌ ಹೇಗಿರುತ್ತೆ ಗೊತ್ತಾ?

Public TV
1 Min Read
free bus travel pink ticket

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ (Congress Guarantee) ಘೋಷಿಸಿದ್ದ 5 ಗ್ಯಾರಂಟಿಗಳ ಪೈಕಿ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (Free Bus Travel) ಯೋಜನೆ ‘ಶಕ್ತಿ’ಗೆ (Shakti Scheme) ರಾಜ್ಯಾದ್ಯಂತ ಇಂದು (ಭಾನುವಾರ) ಚಾಲನೆ ಸಿಗಲಿದೆ. ಇದೇ ಹೊತ್ತಿನಲ್ಲಿ ಕೆಎಸ್‌ಆರ್‌ಟಿಸಿ (KSRTC) ಫ್ರೀ ಬಸ್‌ ಪ್ರಯಾಣದ ಟಿಕೆಟ್‌ ಬಿಡುಗಡೆ ಮಾಡಿದೆ. ಆ ಟಿಕೆಟ್‌ ಹೇಗಿದೆ ಗೊತ್ತಾ?

ಮಹಿಳೆಯರಿಗಾಗಿ ಘೋಷಿಸಿದ್ದ ‘ಶಕ್ತಿ’ ಯೋಜನೆ ಚಾಲನೆಗೆ ಕ್ಷಣಗಣನೆ ಶುರುವಾಗಿದ್ದು, ಯೋಜನೆ ಜಾರಿಗೂ ಮೊದಲು ಸಾರಿಗೆಯ ನಾಲ್ಕು ನಿಗಮಗಳು ತಯಾರಿ ನಡೆಸಿದ್ದವು. ಕೆಎಸ್‌ಆರ್‌ಟಿಸಿ ಯಿಂದಲೂ ಉಚಿತ ಟಿಕೆಟ್‌ ತಯಾರಿ ನಡೆದಿತ್ತು. ಇದನ್ನೂ ಓದಿ: ಖಾಸಗಿ ಬಸ್‍ಗಳಲ್ಲೂ ಉಚಿತ ಪ್ರಯಾಣ ಸೇವೆ ಸಿಗುತ್ತಾ- ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು..?

pink ticket

ಹೇಗಿದೆ ಟಿಕೆಟ್?
ಸರ್ಕಾರಿ ಬಸ್‌ಗಳಲ್ಲಿ ಈವರೆಗೆ ನೀಡುತ್ತಿದ್ದ ಟಿಕೆಟ್‌ಗಳು ಸಾಮಾನ್ಯವಾಗಿ ಬಿಳಿ ಬಣ್ಣದ್ದಾಗಿತ್ತು. ಈಗ ಮಹಿಳೆಯರಿಗೆ ವಿಶೇಷ ಟಿಕೆಟ್‌ ರೂಪುಗೊಳಿಸಲಾಗಿದೆ. ಟಿಕೆಟ್‌ ಪಿಂಕ್‌ ಬಣ್ಣದಿಂದ ಕೂಡಿದೆ. ಮಹಿಳೆಯರ ಪ್ರಯಾಣದ ವೇಳೆ ನಿರ್ವಾಹಕರು ಪಿಂಕ್‌ ಬಣ್ಣದ ಟಿಕೆಟ್‌ ನೀಡುತ್ತಾರೆ.

ksrtc free bus travel

ಶಕ್ತಿ ಯೋಜನೆಯಡಿ ಮಹಿಳಾ ಉಚಿತ ಟಿಕೆಟ್‌ ಎಂದು ನಮೂದಿಸಿದೆ. ಎಲ್ಲಿಂದ….. ಎಲ್ಲಿಗೆ….. ಮೊತ್ತ: 0 ರೂ. ಎಂದು ಟಿಕೆಟ್‌ ಮುದ್ರಿಸಲಾಗಿದೆ. ಇದನ್ನೂ ಓದಿ: ಇಂದಿನಿಂದ ಮಹಿಳೆಯರಿಗೆ ಬಸ್ ಫ್ರೀ- ನಗರದಾದ್ಯಂತ 2,000 ಹೋಮ್‍ಗಾರ್ಡ್ಸ್ ನಿಯೋಜನೆ

ವಿಧಾನಸೌಧದ ಮುಂಭಾಗ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಗಲಿದೆ. 18,609 ಬಸ್‌ಗಳು ಉಚಿತ ಪ್ರಯಾಣಕ್ಕೆ ಲಭ್ಯ ಇವೆ. 41.80 ಲಕ್ಷ ಮಹಿಳೆಯರು ಈ ಸೌಲಭ್ಯದ ಫಲಾನುಭವಿಗಳು ಎಂದು ಅಂದಾಜಿಸಲಾಗಿದೆ.

Share This Article