ಡಿಸಿಎಂ ಡಿಕೆಶಿ ಭೇಟಿಯಾದ ದೊಡ್ಮನೆ ಕುಟುಂಬ

Public TV
1 Min Read
DK Shivakumar 7

ಬೆಂಗಳೂರು: ವರನಟ ಡಾ.ರಾಜ್‌ಕುಮಾರ್‌ ಕುಟುಂಬ ಶನಿವಾರ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅವರನ್ನ ಭೇಟಿ ಮಾಡಿದೆ.

ನಟ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರು ಶನಿವಾರ ಡಿಕೆ ಶಿವಕುಮಾರ್‌ ದಂಪತಿಯನ್ನ ಭೇಟಿ ಮಾಡಿದ್ದು, ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಸಕ್ಸಸ್‌ ಬಳಿಕ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್‌ ಕೊಟ್ಟ ನಿರ್ದೇಶಕ ಸುದೀಪ್ತೋ ಸೇನ್

2023ರ ವಿಧಾನಸಭೆ ಚುನಾವಣೆಗೆ (Karnataka Assembly Election) ಕೆಲವೇ ದಿನಗಳು ಬಾಕಿಯಿರುವಾಗ ಗೀತಾ ಶಿವರಾಜ್‌ಕುಮಾರ್‌ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಅಲ್ಲದೇ ಕಾಂಗ್ರೆಸ್‌ (Congress) ಅಭ್ಯರ್ಥಿಗಳ ಪರ ಶಿವರಾಜ್‌ಕುಮಾರ್‌ ದಂಪತಿ ಪ್ರಚಾರ ಸಹ ನಡೆಸಿದ್ದರು. ಚುನಾವಣೆ ಮುಕ್ತಾಯಗೊಂಡ ನಂತರ ಇದೇ ಮೊದಲ ಬಾರಿಗೆ ಡಾ.ರಾಜ್‌ ಕುಟುಂಬ ಡಿ.ಕೆ ಶಿವಕುಮಾರ್‌ ಅವರನ್ನ ಭೇಟಿಮಾಡಿದ್ದು ವಿಶೇಷ. ಇದನ್ನೂ ಓದಿ: ಟೈಗರ್‌ ವಿನೋದ್‌ ಪ್ರಭಾಕರ್‌, ಸೌಂದರ್ಯ ಜಯಮಾಲಾ ಭೇಟಿ; ಬಾಲ್ಯದ ದಿನಗಳಿಗೆ ಜಾರಿದ ಅಣ್ಣ-ತಂಗಿ 

Share This Article