ಸಿನಿಮಾರಂಗದಲ್ಲಿ ನಾನಾ ಬಗೆಯ ಪ್ರಯೋಗಗಳು ಮತ್ತು ನವೀನ ಕಥಾನಕದ ಚಿತ್ರಗಳು ವ್ಯಾಪಕವಾಗಿ ರೂಪುಗೊಳ್ಳುತ್ತಿವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಎಲ್ಲಾ ಲಕ್ಷಣಗಳನ್ನೂ ಒಳಗೊಂಡಿರುವ ಚಿತ್ರ ಅಂದರೆ ‘ಕರಿಹೈದ ಕೊರಗಜ್ಜ'(Kari Haida Koragajja). ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸದ್ಯದ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣವಾಗಿರೋದು ಅಂದರೆ ಕಥೆ ಮತ್ತು ಒಟ್ಟಾರೆ ಸಿನಿಮಾ ಸಿದ್ದಗೊಂಡಿರುವ ರೀತಿ.
ತ್ರಿವಿಕ್ರಮ ಸಾಫಲ್ಯ ನಿರ್ಮಾಣ ಮಾಡಿರುವ ಈ ಚಿತ್ರವೀಗ ಎಲ್ಲರ ನಿರೀಕ್ಷೆಗೆ ಕಾರಣವಾಗಿದೆ. ಅಷ್ಟಕ್ಕೂ ಇದೀಗ ಎಲ್ಲೆಡೆ ತುಳುನಾಡ ದೈವವಾದ ಕೊರಗಜ್ಜನ ಕಾರಣೀಕಗಳ ಪ್ರಭೆ ಹಬ್ಬಿಕೊಂಡಿದೆ. ತುಳುನಾಡಿನ ಗಡಿ ದಾಟಿ ಕೊರಗಜ್ಜನ ಪವಾಡಗಳು ಪಸರಿಸಿಕೊಂಡು, ಎಲ್ಲಾ ಭೂ ಭಾಗಗಳಲ್ಲಿ ಯೂ ಕೊರಗಜ್ಜನಿಗೆ ಭಕ್ತಗಣ ಸೃಷ್ಟಿಯಾಗಿದೆ. ಇಂಥಾ ಶಕ್ತಿ ಹೊಂದಿರುವ ಕೊರಗಜ್ಜನ ನಿಖರವಾದ ಕಥೆ ಹೊಂದಿರೋ ಈ ಚಿತ್ರ ತಯಾರುಗೊಂಡಿದ್ದರ ಹಿಂದೆ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯರ ಶ್ರಮ ದೊಡ್ಡದಿದೆ. ಇದನ್ನೂ ಓದಿ:‘ಪೊನ್ನಿಯನ್ ಸೆಲ್ವನ್ 2’ ಸಕ್ಸಸ್ ಬಳಿಕ ನಯನತಾರಾ ಜೊತೆಯಾದ ಜಯಂರವಿ
ತ್ರಿವಿಕ್ರಮ ಸಾಫಲ್ಯ (Trivikram Sapalya) ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ. ಯಶಸ್ವಿ ಉದ್ಯಮಿಯಾಗಿದ್ದರೂ ಸಿನಿಮಾ ಪ್ರೇಮವನ್ನು ಸದಾ ಕಾಯ್ದುಕೊಂಡಿದ್ದ ಅವರು ದಶಕಗಳಷ್ಟು ಕಾಲದಿಂದ ನಿರ್ಮಾಪಕರಾಗಿ (Producer) ಗುರುತಿಸಿಕೊಂಡಿದ್ದಾರೆ. 2012ರಲ್ಲಿ ‘ಪರಿ’ ಎಂಬ ಸಿನಿಮಾವನ್ನು ತ್ರಿವಿಕ್ರಮ ನಿರ್ಮಾಣ ಮಾಡಿದ್ದರು. ರಾಕೇಶ್ ಅಡಿಗ, ಹರ್ಷಿಕಾ ಪೂಣಚ್ಚ ಮುಂತಾದವರು ನಟಿಸಿದ್ದ ಆ ಚಿತ್ರ ಒಂದು ಮಟ್ಟಿಗೆ ಗೆಲುವು ದಾಖಲಿಸಿತ್ತು. ಆ ನಂತರದಲ್ಲಿ ಸಾಫಲ್ಯ ನಿರ್ಮಾಣ ಮಾಡಿದ್ದದ್ದು ‘ಸೀಜರ್’ ಎಂಬ ಚಿತ್ರವನ್ನು. ವಿನಯ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ (Chiranjeevi Sarja) ನಾಯಕನಾಗಿ ನಟಿಸಿದ್ದರು. ರವಿಚಂದ್ರನ್ ಮತ್ತು ಪ್ರಕಾಶ್ ರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂದಿತ್ತು. ಸಂಪೂರ್ಣ ಆಕ್ಷನ್ ಅಂಶಗಳೊಂದಿಗೆ ಮೂಡಿ ಬಂದಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿತ್ತು. ಬೆಸ್ಟ್ ಆಕ್ಷನ್ ಚಿತ್ರವಾಗಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿತ್ತು. ಇದನ್ನೂ ಓದಿ:ಮೆಗಾ ಪ್ರಿನ್ಸ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ ಗ್ರ್ಯಾಂಡ್ ಎಂಗೇಜ್‌ಮೆಂಟ್
ಗ್ಯಾಪ್‌ನ ನಂತರ ಇದೀಗ ತ್ರಿವಿಕ್ರಮ್ ಸಾಫಲ್ಯ ನಿರ್ಮಾಣ ಮಾಡಿರುವ ಚಿತ್ರ ‘ಕರಿಹೈದ ಕೊರಗಜ್ಜ’. ಸುಧೀರ್ ಅತ್ತಾವರ್ ನಿರ್ದೇಶನ ಮಾಡಿರುವ ಈ ಚಿತ್ರ ಕೊರಗಜ್ಜನ ರೋಚಕ ಜೀವನಗಾಥೆಯನ್ನೊಳಗೊಂಡಿದೆ. ಕೊರಗ ಸಮುದಾಯದ ಒಪ್ಪಿಗೆ ಪಡೆದೇ, ಕೊರಗಜ್ಜನ ಅಧಿಕೃತ ಕಥೆಗೆ ಸಿನಿಮಾ ಫ್ರೇಮು ತೊಡಿಸಲಾಗಿದೆಯಂತೆ. ಈ ಚಿತ್ರದಲ್ಲಿ ಘಟನುಘಟಿ ಕಲಾವಿದರ ದಂಡೇ ಇದೆ. ಬಾಲಿವುಡ್ ಖ್ಯಾತ ನಟ ಕಬೀರ್ ಬೇಡಿ ರಾಜನಾಗಿ ನಟಿಸಿದ್ದಾರೆ. ಭವ್ಯ, ಶ್ರುತಿ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಪ್ರತಿಭಾವಂತ ಯುವ ನಟ ಭರತ್ ಕೊರಗಜ್ಜನಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಾ ಖ್ಯಾತ ಕೊರಿಗ್ರಾಫರ್ ಸೋಫಾರ್ಕರ್ ಗುಳಿಗನ ಪಾತ್ರ ಮಾಡಿದ್ದಾರೆ. ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.
ಇಂಥದೊಂದು ಅಪರೂಪದ ಸಿನಿಮಾವನ್ನು ಸಾಧ್ಯವಾಗಿಸಿರುವ ತ್ರಿವಿಕ್ರಮ್ ಸಾಫಲ್ಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಅಲ್ಲಿಯೇ ಓದು ಮುಗಿಸಿ, ಆ ನಂತರ ಕಷ್ಟದಿಂದಲೇ ಬದುಕು ಕಟ್ಟಿಕೊಂಡಿರುವ ಸಾಫಲ್ಯ ಯಶಶ್ವಿ ಉದ್ಯಮಿಯಾಗಿ ನೆಲೆ ಕಂದುಕೊಂಡಿದ್ದರ ಹಿಂದೆ ಎಲ್ಲರಿಗೂ ಸ್ಫೂರ್ತಿಯಾಗುವಂಥ ಕಥನವಿದೆ. ಟ್ರಾನ್ಸ್ಫರ್ಮೆರ್ ತಯಾರಿಸುವ ಬಹು ದೊಡ್ಡ ಉದ್ದಿಮೆ ನಡೆಸುವ ತ್ರಿವಿಕ್ರಮ ಅವರು ಇದೀಗ ನಿರ್ಮಾಪಕರಾಗಿಯೂ ನೆಲೆ ಕಂಡುಕೊಂಡಿದ್ದಾರೆ. ಕೊರಗಜ್ಜ ಚಿತ್ರದ ಜೊತೆಗೇ ಮತ್ತೊಂದಷ್ಟು ಸಿನಿಮಾಗಳ ನಿರ್ಮಾಣ ಕಾರ್ಯದಲ್ಲಿಯೂ ಬ್ಯುಸಿಯಾಗಿದ್ದಾರೆ. ರಾಜಕುಮಾರ್, ವಿಷ್ಣುವರ್ಧನ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದು, ಅಪಾರವಾದ ಸಿನಿಮಾಶಕ್ತಿ ರೂಢಿಸಿಕೊಂಡಿರುವ ತ್ರಿವಿಕ್ರಮ ಸಾಫಲ್ಯ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕರಾಗಿ ಮುಂಚೂಣಿಯಲ್ಲಿದ್ದಾರೆ.