ರೈಲು ದುರಂತದ ಬಳಿಕ ಒಡಿಶಾದಲ್ಲಿ ಒಂದಿಲ್ಲೊಂದು ಅವಘಡ – ರೈಲು ಬೋಗಿಯಲ್ಲಿ ಆಕಸ್ಮಿಕ ಬೆಂಕಿ

Public TV
1 Min Read
train fire

ಭುವನೇಶ್ವರ: ಒಡಿಶಾದ (Odisha) ನುವಾಪಾದ (Nuvapada) ಜಿಲ್ಲೆಯಲ್ಲಿ ಗುರುವಾರ ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ (Coach) ಆಕಸ್ಮಿಕವಾಗಿ ಬೆಂಕಿ (Fire) ಕಾಣಿಸಿಕೊಂಡಿದ್ದು, ಒಂದು ಗಂಟೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ರೈಲಿನ ಬ್ರೇಕ್ ಸ್ಟಕ್ ಆಗಿದ್ದ ಕಾರಣ ಈ ಅವಘಡ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ರೈಲಿನ ಬ್ರೇಕ್‌ಪಾಡ್‌ಗಳ (Brake Pad) ಸಮಸ್ಯೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಿಂದಾಗಿ ಪ್ರಯಾಣಿಕರು ಭಯಭೀತರಾಗಿ ರೈಲಿನಿಂದ ಹೊರಬಂದಿದ್ದಾರೆ. ಇದನ್ನೂ ಓದಿ: ದಲಿತರ ಪ್ರವೇಶಕ್ಕೆ ನೋ ಎಂದ ಜನ – ದೇವಸ್ಥಾನಕ್ಕೆ ಬೀಗ ಜಡಿದ ತಹಶಿಲ್ದಾರ್

ಗುರುವಾರ ಸಂಜೆ ದುರ್ಗ್- ಪುರಿ ಎಕ್ಸ್‌ಪ್ರೆಸ್‌ (Durg-Puri Express) ರೈಲು ಖರಿಯಾರ್ ರೋಡ್ ನಿಲ್ದಾಣವನ್ನು ತಲಪುತ್ತಿದ್ದಂತೆ ರೈಲಿನ ಬಿ3 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಜನರಲ್ಲಿ ಭಯವುಂಟಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ. ಒಂದು ಗಂಟೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ರಾತ್ರಿ 11 ಗಂಟೆಯ ವೇಳೆಗೆ ಮತ್ತೆ ರೈಲು ಸಂಚಾರ ಪ್ರಾರಂಭವಾಗಿದೆ. ಇದನ್ನೂ ಓದಿ: ಮುಂಬೈನಲ್ಲಿ ಡೆಡ್ಲಿ ಮರ್ಡರ್ – ಗೆಳತಿಯನ್ನು ಕೊಂದು ಕುಕ್ಕರ್‌ನಲ್ಲಿ ಕುದಿಸಿದ ಪ್ರಿಯತಮ

Share This Article