ಲೂಸಿಯಾ ಪವನ್ ನಿರ್ದೇಶನದ ‘ಧೂಮಂ’ ಚಿತ್ರದಲ್ಲಿ ‘ಕೆಜಿಎಫ್’ ರಾಕಿಭಾಯ್ : ಟ್ರೈಲರ್ ರಿಲೀಸ್

Public TV
2 Min Read
Dhoomam 1

ರಾಕಿಂಗ್ ಸ್ಟಾರ್ ಯಶ್ ‘ಧೂಮಂ’ (Dhoomam) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಲೂಸಿಯಾ ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೈಲರ್ ಇಂದು 12.59ಕ್ಕೆ ಬಿಡುಗಡೆಯಾಗಿದ್ದು,  ಆ ಟ್ರೈಲರ್ ನಲ್ಲಿ ನೀವು ಯಶ್ ಅವರನ್ನು ನೋಡಬಹುದಾಗಿದೆ. ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ರಿಲೀಸ್ ಆಗಿದ್ದು ಕನ್ನಡ ಮತ್ತು ಮಲಯಾಳಂನಲ್ಲಿ ಅದನ್ನು ನೋಡಬಹುದಾಗಿದೆ. ಯಶ್  (Yash) ಅವರದ್ದು ಯಾವ ಪಾತ್ರ? ಅವರು ಹೇಗೆ ಕಾಣಿಸುತ್ತಾರೆ ಎನ್ನುವುದನ್ನು ನೀವು ಟ್ರೈಲರ್ ನಲ್ಲೇ ನೋಡಬೇಕು.

Dhoomam

ಪವನ್ ಕುಮಾರ್ (Pawan Kumar) ನಿರ್ದೇಶನದ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಈ ಸಿನಿಮಾವನ್ನು ಕೇವಲ ಎರಡೇ ಎರಡು ತಿಂಗಳಲ್ಲಿ ಚಿತ್ರೀಕರಣ ಮುಗಿಸಿದೆ ಅಚ್ಚರಿ ಮೂಡಿಸಿದ್ದರು ನಿರ್ದೇಶಕರು. ಈ ಕುರಿತು ಫೋಟೋವೊಂದನ್ನು ಹಂಚಿಕೊಂಡಿದ್ದ ಹೊಂಬಾಳೆ ಫಿಲ್ಮ್ಸ್, ತಮ್ಮ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಮತ್ತೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ ಎಂದು ಘೋಷಿಸಿದ್ದರು.

Dhoomam 2

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದ ನಿರ್ದೇಶಕರೇ ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ವಿಶೇಷ. ಪ್ರಧಾನ ಪಾತ್ರದಲ್ಲಿ ಫಾಹದ್ ಫಾಸಿಲ್  (Fahadh Faasil) ನಟಿಸಿದ್ದಾರೆ. ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಪರ್ಣ ಬಾಲಮುರಳಿ (Aparna Balamurali) ಜೊತೆಯಾಗಿದ್ದಾರೆ. ಕನ್ನಡದ ಅಚ್ಯುತ್ ಕುಮಾರ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.  ಸೆಪ್ಟೆಂಬರ್ 30ರಂದು ಘೋಷಣೆಯಾಗಿದ್ದ ಈ ಸಿನಿಮಾ, ಅಕ್ಟೋಬರ್ 9ರಂದು ಮುಹೂರ್ತ ಮಾಡಿತ್ತು.

Dhoomam 1

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಸಲಾರ್ ಸಿನಿಮಾ ಕೂಡ ಇನ್ನೇನು ಚಿತ್ರೀಕರಣದ ಕೊನೆಯ ಹಂತದಲ್ಲಿದೆ. ಶ್ರೀಮುರುಳಿ ನಟನೆಯ ಬಘೀರ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಯುವ ರಾಜ್ ಕುಮಾರ್ ನಟನೆಯ ಯುವ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಜೊತೆಗೆ ತಮಿಳು ಮತ್ತು ಹಿಂದಿಯಲ್ಲೂ ಸಿನಿಮಾ ಮಾಡುವುದಾಗಿ ಹೊಂಬಾಳೆ ಘೋಷಣೆ ಮಾಡಿದೆ.

 

ಐದು ವರ್ಷದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಬಂಡವಾಳವನ್ನು ಸಿನಿಮಾ ರಂಗದಲ್ಲಿ ಹೂಡುವುದಾಗಿ ಹೇಳಿರುವ ನಿರ್ಮಾಪಕ ವಿಜಯ ಕಿರಗಂದೂರು, ಈಗಾಗಲೇ ಹಲವು ಚಿತ್ರಗಳನ್ನು ಘೋಷಣೆ ಮಾಡಿದ್ದಾರೆ. ಕಾಂತಾರ 2 ಸಿನಿಮಾ ಮಾಡಲು ಯೋಜನೆ ಈಗಾಗಲೇ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಕೆಜಿಎಫ್ 3 ಸಿನಿಮಾ ಕೂಡ ಶುರು ಮಾಡಲಿದ್ದಾರಂತೆ. ಅಲ್ಲದೇ, ಬಾಲಿವುಡ್ ನಲ್ಲಿ ಸ್ಟಾರ್ ನಟನ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎನ್ನುವುದು ಹೊಸ ವರ್ತಮಾನ.

Share This Article