ಹನಿಮೂನ್‌ ಎಲ್ಲಿ ಎಂದಿದ್ದಕ್ಕೆ, ವಾಶ್‌ರೂಮ್‌ ಎಂದ ಅಭಿ

Public TV
1 Min Read
abhi 1

ಅಂಬರೀಶ್-ಸುಮಲತಾ (Sumalatha)  ಅವರ ಪುತ್ರ ಅಭಿಷೇಕ್- ಅವಿವಾ (Aviva Bidapa) ಆರತಕ್ಷತೆ ಅದ್ದೂರಿಯಾಗಿ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯುತ್ತಿದೆ. ಸ್ಯಾಂಡಲ್‌ವುಡ್ ನಟ- ನಟಿಯರು ಬಾಲಿವುಡ್ ಸ್ಟಾರ್ಸ್ ಸಾಕ್ಷಿಯಾಗುವ ಮೂಲಕ ನವಜೋಡಿಗೆ ಶುಭಕೋರುತ್ತಿದ್ದಾರೆ. ಇದೀಗ ಅವಿವಾ ಜೊತೆಗಿನ ಮದುವೆ ಬಗ್ಗೆ ಅಭಿಷೇಕ್ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ಮದುವೆ ಆಯ್ತು, ಹನಿಮೂನ್‌ ಎಲ್ಲಿಗೆ ಹೋಗ್ತೀರಾ ಎಂದು ಕೇಳಿದ ಪ್ರಶ್ನೆಗೆ ಅಭಿ ಏನಂದ್ರು ಗೊತ್ತಾ.?

abhishek 5 1

ಐದಾರು ವರ್ಷಗಳ ಪ್ರೀತಿಗೆ ಅಭಿವಾ ಜೂನ್ 5ಕ್ಕೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಕಾರ್ಯಕ್ರಮ ನಡೆಯುತ್ತಿದೆ. ಅಭಿವಾ ಜೋಡಿ ಗೋಲ್ಡನ್ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ. ಅಭಿವಾ ಆರತಕ್ಷತೆಗೆ ಚಿತ್ರರಂಗ- ರಾಜಕೀಯ ಸಾಕ್ಷಿಯಾಗಿದೆ.

ramya 1

ಪ್ರೀತಿಸಿದ ಹುಡುಗಿ ಅವಿವಾ ತಮ್ಮ ಪತ್ನಿಯಾಗಿರುವ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೆ. ಪ್ರತಿ ಪ್ರೇಮಿಗೂ ಏನು ಫೀಲ್ ಆಗುತ್ತೋ ನನಗೂ ಹಾಗೇ ಫೀಲ್ ಆಗುತ್ತಿದೆ. ನಮ್ಮ ತಂದೆ ಅಭಿಮಾನಿಗಳ ಪ್ರೀತಿಯ ಶಕ್ತಿ ಅದನ್ನ ತಡಿಯೋಕೆ ಶಕ್ತಿ ಬೇಕು. ರಿಷಬ್ ಹೇಳಿದ್ರು, ಅಂಬರೀಶ್ ಅಣ್ಣ ಮಗನ ಮದುವೆ ಸ್ಟೇಜ್ ಮುರಿಯಲೇ ಬೇಕು ಅಂತಾ ಹಾರೈಸಿದ್ರು.

ನಮ್ಮ ಮದುವೆ ರಿಸೆಪ್ಷನ್‌ಗೆ ಬಂದಿದ್ದಕ್ಕೆ ಧನ್ಯವಾದಗಳು. ನಿಮ್ಮ ನನ್ನ ಸ್ನೇಹಿತ, ನಿನ್ನ ಮದುವೆನಾ ಮಿಸ್ ಮಾಡೋಕೆ ಆಗುತ್ತಾ ಅಂದ್ರು. ಅವರ ಸೆಕ್ಯೂರಿಟಿ ಅದನ್ನಲ್ಲಾ ಮ್ಯಾನೇಜ್ ಮಾಡೋದೇ ಕಷ್ಟ. ಹೀಗಿರುವಾಗ ಎಲ್ಲಾ ಕಡೆದಿಂದ ಬಂದಿದ್ದಾರೆ ಸ್ಟಾರ್ಸ್. ಅಪ್ಪನ ಮೇಲಿರುವ ಅಭಿಮಾನಕ್ಕೆ. ಅಪ್ಪ ಇದ್ದಿದ್ರೆ ಈ ಖುಷಿ ಡಬಲ್ ಆಗುತ್ತಿತ್ತು. ಶತ್ರುಘ್ನ ಸಿನ್ಹಾ ಅವರಿಗೆ ಕಾಲು ಇನ್‌ಜುರಿ ಆಗಿತ್ತು ಆದ್ರು ಬಂದಿದ್ದಾರೆ. ಅವರು ಹಾರೈಸಿ ಹೋದರು. ಚಿರಂಜೀವಿ ಅವರು ಖುಷಿಪಟ್ಟರು. ಮದುವೆ ಆಗಿದೆ ಹನಿಮೂನ್‌ಗೆ ಎಲ್ಲಿಗೆ ಹೋಗುತ್ತೀರಾ ಎಂದು ಕೇಳಿದ್ದಕ್ಕೆ ಸದ್ಯಕ್ಕೆ ವಾಶ್‌ರೂಮ್‌ಗೆ ಹೋಗ್ತೀನಿ ಎಂದು ಅಭಿ ನಕ್ಕಿದ್ದಾರೆ.

Share This Article