ಭಾರತದಲ್ಲೇ ಪ್ರಥಮ ಬಾರಿಗೆ ತಯಾರಾದ ಕ್ರಿಸ್ಟಲ್ ಶಾಗ್ಲಿಯರ್ ನಲ್ಲಿ ಅಭಿ-ಅವಿವಾ ಆರತಕ್ಷತೆ

Public TV
2 Min Read
Crystal Shaglier Design

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸ್ವರ್ಗವೇ ಧರೆಗಿಳಿದಿದೆ. ಇಂದು ಸಂಜೆ 7 ರಿಂದ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ (Abhishek Ambarish) ಹಾಗೂ ಫ್ಯಾಷನ್ ಗುರು ಎಂದೇ ಖ್ಯಾತರಾದ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ (Aviva) ಅವರ ಆರತಕ್ಷತೆ (Reception) ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ಅದ್ದೂರಿ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಆರತಕ್ಷತೆಯ ಮಂಟಪ ಹೂವು, ತಳಿರು, ತೋರಣಗಳಿಂದ ಅಲಂಕೃತಗೊಂಡಿದೆ.

abhishek ambareesh 1 1

ಸಾಮಾನ್ಯವಾಗಿ ಭಾರೀ ಬಜೆಟ್ ಸಿನಿಮಾಗಳಲ್ಲಿ ಅದ್ದೂರಿಯಾಗಿ ಮದುವೆ, ಆರತಕ್ಷತೆ ಮಾಡುವುದನ್ನು ದೃಶ್ಯವಾಗಿ ನೋಡಿದ್ದೇವೆ. ಆದರೆ, ನಟಿ ಸುಮಲತಾ ಅವರು ತಮ್ಮ ಪುತ್ರನ ಆರತಕ್ಷತೆಗಾಗಿ ಅಂಥದ್ದೊಂದು ದೃಶ್ಯ ವೈಭವವನ್ನೇ ನಿಜವಾಗಿಯೂ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ವೇದಿಕೆಯನ್ನು ನೋಡಲು ಎರಡು ಕಣ್ಣು ಸಾಲವು. ಇದನ್ನೂ ಓದಿ:ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್

Abhishek 2

ಅದೊಂದು ಅಲಂಕೃತವಾದ ವೇದಿಕೆ. ಹೂಗಳು ಮತ್ತು ಬಣ್ಣ ಬಣ್ಣದ ಲೈಟ್ ಗಳಿಂದಾಗಿ ಅದು ಫಳಫಳ ಹೊಳೆಯುತ್ತಿದೆ. ಗೋಲಾಕಾರದಲ್ಲಿ ಅದು ಮಿರಿಮಿರಿ ಮಿಂಚುತ್ತಿದೆ. ಈ ಮಧ್ಯ ನಿಂತು ನವಜೋಡಿಗಳು ವೇದಿಕೆಗೆ ಮತ್ತಷ್ಟು ರಂಗು ತುಂಬಲಿದ್ದಾರೆ. ಅಂದಹಾಗೆ ಈ ವೇದಿಕೆಯು  ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್ (Crystal Shaglier) ನಲ್ಲಿ ನಿರ್ಮಾಣವಾಗಿದೆ. 300 ಶಾಗ್ಲಿಯರ್ಸ್ ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್ ಅನ್ನು ಬಳಸಿಕೊಳ್ಳಲಾಗಿದೆ.

Sumalatha Abhishek

ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಡಿಸೈನ್ ನಿರ್ಮಾಣ ಮಾಡಲಾಗಿದೆ ಎನ್ನುವ ಮಾಹಿತಿಯು ಇದೆ. ದೆಹಲಿಯ ಸಮೋರದಾ ಬಾದ್ ನಿಂದ  ಇವುಗಳನ್ನು ತರಿಸಲಾಗಿದೆ ಎಂದು ಆಪ್ತರು ಮಾಹಿತಿ ಹಂಚಿಕೊಂಡಿದ್ದಾರೆ. ವೇಡಿಂಗ್ಸ್ ಬೈ ಧ್ರುವ ಎನ್ನುವ ಸಂಸ್ಥೆಯು ಇದರ ನಿರ್ಮಾಣದ ಹೊಣೆ ಹೊತ್ತಿದ್ದು, ಈ ಸಂಸ್ಥೆಯೇ ಶಿವರಾಜ್ ಕುಮಾರ್ ಮಗಳ ಮದುವೆ ಹಾಗೂ ಯಶ್ ಮದುವೆ, ಜನಾರ್ದನ ರೆಡ್ಡಿ ಮಗಳ ಮದುವೆ ಮತ್ತು ಯದುವೀರ್ ಮಹರಾಜರು ಸೇರಿದಂತೆ ಸಾಕಷ್ಟು ಗಣ್ಯರ ಮದುವೆಗೆ ವೇದಿಕೆ ರೆಡಿ ಮಾಡಿ ಕೊಟ್ಟಿದೆ.

ಅಂದಹಾಗೆ ಇಂದು ನಡೆಯಲಿರುವ ಆರತಕ್ಷತೆಗೆ ಪರ ಭಾಷಾ ನಟ ಸೂರ್ಯ, ಕಾಶ್ಮೀರ ಮುಖ್ಯ ಮಂತ್ರಿ ಫಾರುಖ್ ಅಬ್ದುಲಾ, ಚಿರಂಜೀವಿ ಕುಟುಂಬ, ಹಿರಿಯ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್, ನಟ ಸಿನ್ಹಾ, ಸಿ.ಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರಂತೆ.

Share This Article