ಕಾಂಗ್ರೆಸ್‌ ಜನರನ್ನು ಮಾತ್ರವಲ್ಲ ಸಿಎಂ ವಿಚಾರದಲ್ಲಿ ಡಿಕೆಶಿಯನ್ನೂ ಯಾಮಾರಿಸಿದೆ – ಸಂಸದ ಮುನಿಸ್ವಾಮಿ ವ್ಯಂಗ್ಯ

Public TV
1 Min Read
muniswamy

ನವದೆಹಲಿ: ಮುಖ್ಯಮಂತ್ರಿಯಾಗುವ ಲೆಕ್ಕಚಾರದಲ್ಲಿದ್ದ ಡಿ.ಕೆ. ಶಿವಕುಮಾರ್‌ರನ್ನ (DK Shivakumar) ಕಾಂಗ್ರೆಸ್ (Congress) ಯಾಮಾರಿಸಿದೆ. ಈಗ ಜನರನ್ನೂ ಯಾಮಾರಿಸಲು ಶುರು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೊದಲು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕೋಲಾರ ಸಂಸದ ಮುನಿಸ್ವಾಮಿ (Muniswamy) ಆಗ್ರಹಿಸಿದರು.

CONGRESS

ಗ್ಯಾರಂಟಿಗಳಿಗೆ (Congress Guarantee) ಹಾಕಿದ ಕಂಡೀಷನ್ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಅವರು, ಜನರಿಗೆ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ನೀಡಿ ಯಾಮಾರಿಸಿದೆ. ಚುನಾವಣೆ ಪ್ರಚಾರದ ಸಮಯದಲ್ಲಿ ಐದು ಗ್ಯಾರಂಟಿ ಘೋಷಣೆ ವೇಳೆ ಯಾವುದೇ ಕಂಡೀಷನ್ ಬಗ್ಗೆ ಹೇಳಲಿಲ್ಲ. ಎಲ್ಲರಿಗೂ ಫ್ರೀ ಎಂದರು. ಈಗ ವಿದ್ಯುತ್ ಬಿಲ್‌ನಲ್ಲಿ ಕಂಡೀಷನ್ ಹಾಕಿದೆ. 12 ತಿಂಗಳ ಬಳಕೆಯ ಮೇಲೆ 10% ಸರಾಸರಿ ಹೆಚ್ಚಿಸಿದೆ. ಯುವನಿಧಿ, ಗೃಹಲಕ್ಷ್ಮಿ ಯೋಜನೆಯಲ್ಲಿ ಮೋಸ ಮಾಡುತ್ತಿದ್ದಾರೆ. ಅತ್ತೆ ಸೊಸೆ ಜಗಳಕ್ಕೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟ್ಯಾಕ್ಸ್ ಕಟ್ಟೋರು ಯಾರೂ ಗೃಹಲಕ್ಷ್ಮಿ ಬೇಕು ಅಂತ ಕೇಳ್ತಿಲ್ಲ: ಡಿಕೆಶಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾತಿ ಜನಾಂಗಗಳನ್ನು ನೋಡದೇ ಎಲ್ಲರಿಗೂ ಯೋಜನೆಗಳನ್ನು ನೀಡಿದೆ. ಜನರಿಗೆ ಏನು ಬೇಕು ಎಲ್ಲ ನೀಡಿದೆ. ನಾವು ತಂತ್ರ ಮತ್ತು ಕುತಂತ್ರಗಳಿಂದ ಗೆದ್ದಿದ್ದೇವೆ ಎಂದು ಹಿಂದೆ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕಂಡೀಷನ್ ಹಾಕಿ ಕರ್ನಾಟಕವನ್ನು ದಿವಾಳಿ ಮಾಡಲು ಹೊರಟಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಮನೆಗೆ ಕಳುಹಿಸಲಿದ್ದಾರೆ. ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜನರಿಗೆ ಮಾತ್ರ ಟೋಪಿ ಹಾಕಿಲ್ಲ. ಡಿ.ಕೆ ಶಿವಕುಮಾರ್ ಅವರನ್ನೂ ಯಾಮಾರಿಸಿದೆ. ಕಾಂಗ್ರೆಸ್‌ಗೆ 135 ಸ್ಥಾನಗಳು ಬಂದಾಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಉಮೇದಿನಲ್ಲಿದ್ದರು. ಅವರ ಮುಖದಲ್ಲಿ ಆಗ ಖುಷಿಯೇ ಬೇರೆ ಇತ್ತು. ಅವರು ಮುಖ್ಯಮಂತ್ರಿಯಾಗಲಿಲ್ಲ. ಫಲಿತಾಂಶದಲ್ಲಿದ್ದ ಖುಷಿ ಅವರ ಮುಖದಲ್ಲಿ ಈಗ ಕಾಣುತ್ತಿಲ್ಲ ಎಂದು ಕುಟುಕಿದರು. ಇದನ್ನೂ ಓದಿ: ಶ್ರೀಲಂಕಾ, ಪಾಕಿಸ್ತಾನ ರೀತಿಯ ಪರಿಸ್ಥಿತಿ ಕರ್ನಾಟಕಕ್ಕೆ ಬರಬಾರದು: ಪ್ರತಾಪ್ ಸಿಂಹ

Share This Article