ಶ್ರೀಲಂಕಾ, ಪಾಕಿಸ್ತಾನ ರೀತಿಯ ಪರಿಸ್ಥಿತಿ ಕರ್ನಾಟಕಕ್ಕೆ ಬರಬಾರದು: ಪ್ರತಾಪ್ ಸಿಂಹ

Public TV
2 Min Read
PRATAP SIMHA 2

ನವದೆಹಲಿ: ಕಾಂಗ್ರೆಸ್ ಗ್ಯಾರಂಟಿಯಿಂದ ಶ್ರೀಲಂಕಾ (Srilanka), ಪಾಕಿಸ್ತಾನ (Pakistan) ರೀತಿಯ ಪರಿಸ್ಥಿತಿ ಕರ್ನಾಟಕಕ್ಕೆ ಬರಬಾರದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರದಲ್ಲಿ ಡಿ.ಕೆ ಶಿವಕುಮಾರ್ (DK Shivakumar) ಉಚಿತ, ಖಚಿತ, ನಿಶ್ಚಿತ ಅಂತ ಹೇಳಿದ್ರು. ಸಿದ್ದರಾಮಯ್ಯ (Siddaramaiah) ಅವರು ಎಲ್ಲರಿಗೂ ಉಚಿತ ಅಂದ್ರು. ರಾಜಸ್ಥಾನ, ಪಂಜಾಬ್ ಎಲ್ಲಾ ಕಡೆ ಭರವಸೆ ಕೊಟ್ಟು ಟೋಪಿ ಹಾಕಿದ್ರು. ಅದಕ್ಕೆ ನಾವು ಈ ಭರವಸೆಗಳನ್ನು ಜನರು ನಂಬಲ್ಲ ಅಂತಾ ನಿರ್ಲಕ್ಷ್ಯ ಮಾಡಿದ್ವಿ. ಆದರೆ ಜನರು ಅದನ್ನು ನಂಬಿಕೊಂಡು ಮತ ಹಾಕಿದ್ದಾರೆ ಎಂದು ಹೇಳಿದರು.

ಈಗ ಕಂಡಿಷನ್ ಗಳನ್ನು ಹಾಕುವ ಕೆಲಸ ನಡೆಯುತ್ತಿದೆ. ಈ ಕಂಡಿಷನ್ ನಿಂದ ಬಹುತೇಕ ಬೆಂಗಳೂರು ಜನರಿಗೆ ಗೃಹ ಜ್ಯೋತಿ ಲಾಭ ಸಿಗುವುದಿಲ್ಲ. ಗೃಹ ಲಕ್ಷ್ಮಿ ವಿಚಾರದಲ್ಲೂ ತೆರಿಗೆದಾರರಿಗೆ ಯೋಜನೆ ಇಲ್ಲ ಎಂದಿದ್ದಾರೆ. ಯುವನಿಧಿ ವಿಚಾರದಲ್ಲೂ ಯುವ ಜನರಿಗೆ ಮೋಸ ಆಗಲಿದೆ. ಕೊವೀಡ್ ಬಳಿಕ ಕೆಲಸ ಕಳೆದುಕೊಂಡವರು ಕೂಡ ಯೋಜನೆ ಲಾಭ ಪಡೆಯಲು ಮತ ಹಾಕಿದ್ದರು. ಅವರನ್ನು ಯಾಮಾರಿಸುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Congress Guarantee Electricity

ಬಸ್ ಪ್ರಯಾಣದಿಂದಲೂ ದೊಡ್ಡ ನಷ್ಟವಾಗಲಿದೆ. ನಾವು ಏನೂ ಹೇಳಲ್ಲ, ಜನ ಯಾಮಾರಿರೋದು ಅವರಿಗೆ ಅರ್ಥ ಆಗಲಿದೆ. ಕಾಂಗ್ರೆಸ್ ನಾಯಕರನ್ನು ನೋಡಿದರೆ ಟೋಪಿ ಹಾಕಲು ಬಂದಿದ್ದಾರೆ ಎಂದು ಜನ ಹೇಳಲಿದ್ದಾರೆ. ಇದಕ್ಕೆಲ್ಲ ಸಿದ್ದರಾಮಯ್ಯ ಅವರು ಎಲ್ಲಿಂದ ಹಣ ತರುತ್ತಾರೆ ಎಂದು ಹೇಳಬೇಕು. ಯಾವ ಸಿಎಂ ಎಷ್ಟು ಸಾಲ ಮಾಡಿದ್ದಾರೆ ಶ್ವೇತ ಪತ್ರ ಹೊರಡಿಸಬೇಕು ಎಂದು ಪ್ರತಾಪ್ ಸಿಂಹ (Pratap Simha) ಆಗ್ರಹಿಸಿದರು.  ಇದನ್ನೂ ಓದಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರಿಷ್ಕರಣೆ ಇಲ್ಲ- ಶಿಕ್ಷಣ ಇಲಾಖೆಗೆ ಸಿಎಂ ಮೌಖಿಕ ಸೂಚನೆ

ಇದೇ ವೇಳೆ ಜಾತಿ ಗಣತಿ ಜಾರಿ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿ, 2011 ರಲ್ಲಿಯೇ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಜನರ ಸರ್ವೆ ಮಾಡಲು ನಿರ್ಧರಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರವೂ ಹಣ ನೀಡಿದೆ. ಹಿಂದುಳಿದ ವರ್ಗಗಳನ್ನು ಗುರುತಿಸಿ, ಪೂರಕ ಯೋಜನೆ ಮಾಡಲು ಈ ಸರ್ವೆ ಮಾಡಲಾಗಿದೆ. ಜನರು ಅವರಿಗೆ ಬಹುಮತ ನೀಡಿದ್ದಾರೆ. ಮೀಸಲಾತಿ ವಿಚಾರದಲ್ಲೂ ಏನು ಬೇಕಾದ್ರು ಮಾಡಲಿ. ನಾವು ವಿಪಕ್ಷವಾಗಿ ನಮ್ಮ ಕೆಲಸ ಮಾಡುತ್ತೇವೆ ಎಂದರು.

Share This Article