ಚಾಕ್ಲೇಟ್, ಆಟಿಕೆ ಬೇಕೆಂದು ಹಠ ಹಿಡಿದ ಮಗಳನ್ನು ಕಲ್ಲು ಎತ್ತಿ ಹಾಕಿ ಕೊಂದೇ ಬಿಟ್ಟ ಪಾಪಿ ತಂದೆ

Public TV
1 Min Read
father 2

ಭೋಪಾಲ್: 8 ವರ್ಷದ ಮಗಳು (Daughter) ಚಾಕ್ಲೇಟ್ ಹಾಗೂ ಆಟಿಕೆ ಬೇಕೆಂದು ಹಠ ಹಿಡಿದಿದ್ದಕ್ಕೆ ಪಾಪಿ ತಂದೆ (Father) ಮಗಳ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ 8 ವರ್ಷದ ಮಗಳನ್ನು ಕೊಂದ ಆರೋಪದ ಮೇಲೆ 37 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ಮಾದಕ ವ್ಯಸನಿ ಎಂಬುದು ತಿಳಿದುಬಂದಿದೆ. ವಿಚಾರಣೆ ವೇಳೆ ಆತ ತಾನು ಅತ್ಯಂತ ಬಡವನಾಗಿದ್ದು ಮಗಳು ಯಾವಾಗಲೂ ಚಾಕ್ಲೇಟ್, ಆಟಿಕೆಗಳಿಗಾಗಿ ಹಠ ಹಿಡಿಯುತ್ತಿದ್ದಳು ಎಂದು ಹೇಳಿದ್ದಾನೆ.

KILLING CRIME

ನಾನು ಬಡವನಾಗಿದ್ದು, ಮಗಳು ಯಾವಾಗಲೂ ಹಠ ಮಾಡುತ್ತಿದ್ದಳು. ಇದು ನನಗೆ ಕಿರಿಕಿರಿ ಉಂಟುಮಾಡುತ್ತಿತ್ತು. ಈ ಸಮಸ್ಯೆಯಿಂದ ಮುಕ್ತಿ ಬೇಕೆಂದು ಆಕೆಯನ್ನು ಶನಿವಾರ ರಾತ್ರಿ ತಲೆಗೆ ಕಲ್ಲು ಎತ್ತಿಹಾಕಿ ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (DCP) ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಅಮ್ಮನ ಮೊಬೈಲ್‍ನಲ್ಲಿ ಲೊಕೇಶನ್ ಚೆಕ್ ಮಾಡಿ ಊರು ಬಿಟ್ಟು ಬಾಲಕ!

ಆರೋಪಿಯ ಪತ್ನಿ 3 ವರ್ಷಗಳ ಹಿಂದೆ ಆತನನ್ನು ತೊರೆದಿದ್ದಳು ಎನ್ನಲಾಗಿದೆ. ವ್ಯಕ್ತಿ ಮಗಳನ್ನು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಕರೆದುಕೊಂಡು ಹೋಗಿ ಅಲ್ಲಿ ಹೆಂಚು ಹಾಗೂ ಕಲ್ಲುಗಳನ್ನು ಎತ್ತಿ ಹಾಕಿ ಕೊಂದಿದ್ದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ- ಸ್ಥಳದಲ್ಲೇ ಐವರ ದುರ್ಮರಣ

Share This Article