ಅಂತ್ಯೋದಯ, ಬಿಪಿಎಲ್ ಕಾರ್ಡ್ ಇರೋರಿಗೆ 10 ಕೆಜಿ ಅಕ್ಕಿ ಕೊಟ್ಟೇ ಕೊಡ್ತೀವಿ: ಕೆಹೆಚ್ ಮುನಿಯಪ್ಪ

Public TV
1 Min Read
KH MUNIYAPPA

ಬೆಂಗಳೂರು: ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಇರುವವರಿಗೆ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಸಚಿವ ಕೆಹೆಚ್ ಮುನಿಯಪ್ಪ (K.H.Muniyappa) ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿಗಳು ಕರೆದಿರುವ ಸಭೆಯಲ್ಲಿ ನಾವು ತೀರ್ಮಾನ ಮಾಡುತ್ತೇವೆ. ಆಶ್ವಾಸನೆ ಕೊಟ್ಟಿದ್ದೇವೆ. ಗ್ಯಾರಂಟಿ ಕಾರ್ಡ್ (Guarantee Card) ಕೊಟ್ಟಿದ್ದೇವೆ. 10 ಕೆಜಿ ಅಕ್ಕಿ ಕೊಡೋದು ಖಂಡಿತ. ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ನವರಿಗೆ ನಾವು 10 ಕೆಜಿ ಅಕ್ಕಿ ಕೊಡಲು ನಿರ್ಧಾರ ಮಾಡಿದ್ದೇವೆ ಎಂದರು. ಯಾವಾಗಿನಿಂದ ಜಾರಿಗೆ ಬರುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಇವತ್ತು ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಮಗೆ ರಿಟೈರ್‌ಮೆಂಟ್‌ ಬೇಡ- ರಾಮಲಿಂಗಾ ರೆಡ್ಡಿಗೆ ಅರ್ಚಕರು ಮನವಿ

ಬಿಪಿಎಲ್ ಅಕ್ರಮ ಕಾರ್ಡ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ವಾಸ್ತವಾಂಶದ ಜೊತೆ ಹೋಗುತ್ತೇವೆ. ನಾವು ಈ ಮೊದಲು ಸರ್ಕಾರ ನಡೆಸಿದ್ದೇವೆ, ಈಗಲೂ ನಡೆಸುತ್ತೇವೆ. ಯಾವುದೂ ಸವಾಲಲ್ಲ. ಸರಳವಾಗಿ ಯಾವ ತೊಂದರೆಯೂ ಇಲ್ಲದಂತೆ ನಿಭಾಯಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕಷ್ಟ ಕಾಲದಲ್ಲಿ ಸವದಿ, ಶೆಟ್ಟರ್ ನಮ್ಮ ಪಕ್ಷಕ್ಕೆ ಬಂದು ಶಕ್ತಿ ತುಂಬಿದ್ದಾರೆ: ಡಿಕೆ ಶಿವಕುಮಾರ್

Share This Article