ಬಾಲಿವುಡ್ (Bollywood) ಅಂಗಳದಲ್ಲಿ ಸೌರವ್ ಗಂಗೂಲಿ (Sourav Ganguly) ಬರುವ ಬಗ್ಗೆ ಈ ಹಿಂದೆಯೇ ಬಿಗ್ ಅಪ್‌ಡೇಟ್ ನೀಡಿದ್ದರು. ಸೌರವ್ ಗಂಗೂಲಿ ರೋಲ್‌ನಲ್ಲಿ ರಣಬೀರ್ ಕಪೂರ್ ನಟಿಸಬೇಕಿತ್ತು, ಆದರೆ ಸೌರವ್ ಪಾತ್ರಕ್ಕೆ ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ಕಾಣಿಸಿಕೊಳ್ಳುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ.
ಚಿತ್ರರಂಗದಲ್ಲಿ ಬಯೋಪಿಕ್‌ಗಳ ಹಾವಳಿ ಜಾಸ್ತಿಯಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಜೀವನವನ್ನು ಈಗಾಗಲೇ ಬೆಳ್ಳಿಪರದೆ ತೋರಿಸುವ ಟ್ರೆಂಡ್ ಶುರುವಾಗಿದೆ. ಕೆಲ ವರ್ಷಗಳ ಹಿಂದೆ ಕ್ರಿಕೆಟಿಗ ಎಂ.ಎಸ್ ಧೋನಿ (M.s Dhoni) ಬಯೋಪಿಕ್ ಸಿನಿಮಾ ಬಂದಿತ್ತು. ಚಿತ್ರಮಂದಿರದಲ್ಲಿ ಸಿನಿಮಾ ಕಮಾಲ್ ಮಾಡಿತ್ತು. ಈಗ ಮತ್ತೊಬ್ಬ ಕ್ರಿಕೆಟಿಗ ಸೌರವ್ ಗಂಗೂಲಿ ಜೀವನದ ಬಗ್ಗೆ ಬಯೋಪಿಕ್ ಬರುವ ಈ ಹಿಂದೆಯೇ ತಿಳಿಸಲಾಗಿತ್ತು. ಸೌರವ್ ಪಾತ್ರ ರಣಬೀರ್ ಕಪೂರ್ ನಟಿಸೋದು ಫೈನಲ್ ಆಗಿತ್ತು. ಆದರೆ ಈಗ ಹೀರೋ ಚೇಂಜ್ ಆಗಿದ್ದಾರೆ.
ಈಗಾಗಲೇ ಸಂಜಯ್ ದತ್ ಬಯೋಪಿಕ್ ಮಾಡಿ ನಟಿಸಿ ಸೈ ಎನಿಸಿಕೊಂಡಿರುವ ರಣ್‌ಬೀರ್ ಕಪೂರ್ (Ranbir Kapoor) ಅವರು ಸೌರವ್ ಬಯೋಪಿಕ್‌ಗೆ ಸೆಲೆಕ್ಟ್ ಆಗಿದ್ದರು. ಆದರೆ ಈಗ ಸಿನಿಮಾದಲ್ಲಿ ಕೊಂಚ ಬದಲಾವಣೆ ಆಗಿದೆ. ರಣಬೀರ್ ಬದಲು ಆಯುಷ್ಮಾನ್ ಖುರಾನ್ ನಟಿಸಲಿದ್ದಾರೆ. ಸೌರವ್ ಗಂಗೂಲಿ ರೋಲ್‌ಗೆ ನಟ ಆಯುಷ್ಮಾನ್ ಕಾಣಿಸಿಕೊಳ್ಳಲಿದ್ದಾರಂತೆ. ಇದನ್ನೂ ಓದಿ:27 ವರ್ಷಗಳ ಬಳಿಕ ಮಲಯಾಳಂ ಸಿನಿಮಾ ರಂಗಕ್ಕೆ ಕೀರವಾಣಿ ಎಂಟ್ರಿ
ಒಂದ್ ಕಡೆ ರಣ್‌ಬೀರ್- ಆಯುಷ್ಮಾನ್ ಹೆಸರು ಚಾಲ್ತಿಯಲ್ಲಿದ್ರೆ, ಮತ್ತೊಂದು ಕಡೆ ಈ ಚಿತ್ರಕ್ಕೆ ರಜನಿಕಾಂತ್ ಪುತ್ರಿ ಐಶ್ವರ್ಯ (Aishwarya Rajanikanth) ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ.? ಈ ಬಗ್ಗೆ ಚಿತ್ರತಂಡ ಹೇಳುವವರೆಗೂ ಕಾದುನೋಡಬೇಕಿದೆ.