ನೀರಿನ ಕ್ಯಾನಿನಲ್ಲೇ ಮದ್ಯ- ಎಣ್ಣೆ ಏಟಿನಲ್ಲೇ ನೂತನ ಸಚಿವರನ್ನು ಸ್ವಾಗತಿಸಿದ ಕಾರ್ಯಕರ್ತರು

Public TV
1 Min Read
KOPPALA ALCOHOL 1

ಕೊಪ್ಪಳ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಅದರಲ್ಲೂ ಕನಕಗಿರಿ ವಿಧಾನಸಭಾ ಕ್ಷೇತ್ರ (kanakagiri Assembly Constituency) ದ ಜನರು ಕಾಂಗ್ರೆಸ್ (Congress) ಅಭ್ಯರ್ಥಿ ಶಿವರಾಜ ತಂಗಡಗಿಯನ್ನು ಭರ್ಜರಿ ಗೆಲುವು ತಂದುಕೊಟ್ಟು, ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶ ನೀಡಿದ್ದಾರೆ.

koppala 3

ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿ ಸ್ವಕ್ಷೇತ್ರದ ಕನಕಗಿರಿಗೆ ಆಗಮಿಸಿರುವ ಶಿವರಾಜ ತಂಗಡಗಿ (Shivaraj Tangadagi) ಆಗಮಿಸಿದ ಹಿನ್ನೆಲೆ ಕಾರ್ಯಕರ್ತರನ್ನು ಮದ್ಯದ ಅಮಲಿನಲ್ಲಿ ತೇಲಾಡಿಸಲು ನೀರಿನ ಕ್ಯಾನ್ (Water Can) ನಲ್ಲಿ ಮದ್ಯವನ್ನು ತುಂಬಿ ಸಂಭ್ರಮಿಸುತ್ತಿದ್ದಾರೆ. ಆ ವೀಡಿಯೋ ಇದೀಗ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ. ಇಂದು ಕ್ಷೇತ್ರಕ್ಕೆ ಆಗಮಿಸಿದ್ದ ಶಿವರಾಜ ತಂಗಡಗಿ ಸ್ವಾಗತಕ್ಕೆ ಹಲವಡೆ ಮದ್ಯದಲ್ಲಿಯೇ ಕಾರ್ಯಕರ್ತರು ತೇಲಾಡಿರುವ ಚರ್ಚೆಗಳು ಕ್ಚೇತ್ರದಲ್ಲಿ ಶುರುವಾಗಿದೆ. ವೈರಲ್ ಆದ ವೀಡಿಯೋ ಒಂದು ಸಖತ್ ಚರ್ಚೆಯಾಗುತ್ತಿದೆ.

KOPPALA ALCOHOL

ಸಚಿವರ ಆಗಮನ ಹಿನ್ನೆಲೆ 25 ಲೀಟರ್ ನ ಆರು ನೀರಿನ ಕ್ಯಾನ್ ಗಳಲ್ಲಿ ನೀರು ಬದಲು ಮದ್ಯ ತುಂಬಿಸಿ ಜೊತೆ ಗೆ ಭರ್ಜರಿ ಆಹಾರದ ವ್ಯವಸ್ಥೆ ಕೂಡ ಮಾಡಿರುವ ವಿಡಿಯೋ ಫೆÇೀಟೊಗಳು ವೈರಲ್ ಆಗಿವೆ. ಕನಕಗಿರಿ ಪಟ್ಟಣ ಪಂಚಾಯಿತಿ ಸದಸ್ಯ ನೂರಸಾಬ್ ಗಡ್ಡಿಗಾಲ ಈ ಮದ್ಯದ ಪಾರ್ಟಿಯನ್ನು ನೀಡಿರುವ ಆರೋಪ ಕೇಳಿ ಬಂದಿದೆ. ಕೊಪ್ಪಳ ರಸ್ತೆಯ ತಮ್ಮ ನಿವಾಸದಲ್ಲಿ ನೂರಸಾಬ್ ಗಡ್ಡಿಗಾಲ ನೀರಿನ ಕ್ಯಾನ್ ಗಳಲ್ಲಿ ಕಾರ್ಯಕರ್ತರಿಗೆ ಮದ್ಯದ ವ್ಯವಸ್ಥೆ ಮಾಡಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಇದನ್ನೂ ಓದಿ: ಕರೆಂಟ್ ಬಿಲ್ ಕೇಳಲು ಬಂದ್ರೆ ನನ್ನನ್ನು ಕರೆಯಿರಿ: ಸುರೇಶ್ ಗೌಡ

Share This Article