ಕಲಬುರಗಿ: ಮಾಜಿ ಪ್ರಧಾನಿ, ಅನೇಕ ಮಾಜಿ ಸಿಎಂಗಳ ನೆಚ್ಚಿನ ದೇವಸ್ಥಾನ ಗಾಣಗಾಪುರದ (Ganapura) ದತ್ತಾತ್ರೇಯನ ಸನ್ನಿಧಿಯಲ್ಲಿ ಪುಡಿ ರೌಡಿಯೊಬ್ಬ (Rowdy) ಭಕ್ತರ ಮೇಲೆ ದೌರ್ಜನ್ಯ ನಡೆಸಿದ್ದಾನೆ.
ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ದೇಶದ ವಿವಿಧೆಡೆಯಿಂದ ಸಾವಿರಾರು ಭಕ್ತರು ಬರುತ್ತಾರೆ. ಆದರೆ ಇದೇ ದೇವಸ್ಥಾನದ ಸಂಗಮ ಸ್ಥಳದಲ್ಲಿ ಪುಡಿರೌಡಿ ಯಲ್ಲಪ್ಪ ಕಲ್ಲೂರ್ ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯ ತೋರಿ, ಅಟ್ಟಹಾಸ ಮೆರೆದಿದ್ದಾನೆ.
ಗಾಣಗಾಪುರ ನಿವಾಸಿಯಾಗಿರೋ ಯಲ್ಲಪ್ಪ ಕಲ್ಲೂರ್, ಗಾಣಗಾಪುರದ ಸಂಗಮ ಸ್ಥಳದಲ್ಲಿರೋ ಔದುಂಬರ ವೃಕ್ಷದ ಕೆಳಗೆ ದತ್ತ ಚರಿತ್ರೆ ಪಾರಾಯಣಕ್ಕೆ ಭಕ್ತರು ಕುಳಿತ ಸಮಯದಲ್ಲೇ ಅವರ ತಲೆ ಮೇಲೆ ಕಾಲಿಟ್ಟು, ಹಲ್ಲೆ ಮಾಡಿ ದೌರ್ಜನ್ಯ ನಡೆಸಿದ್ದಾನೆ. ಇದನ್ನೂ ಓದಿ: ಬಾಡಿಗೆ ಹಣದ ಆಸೆಗೆ ಚಿಕ್ಕಪ್ಪನ ಮಗನನ್ನೇ ಕೊಂದ
40ಕ್ಕೂ ಅಧಿಕ ಪ್ರಕರಣಗಳು ಹೊಂದಿರುವ ಯಲ್ಲಪ್ಪ, ಕಳೆದ ಕೆಲ ವರ್ಷಗಳಿಂದ ಭಕ್ತರಿಗೆ ಕಿರುಕುಳ ನೀಡುತ್ತ, ದಬ್ಬಾಳಿಕೆ ನಡೆಸುತ್ತಿದ್ದಾನೆ. ಆದರೆ ಇದುವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶದ ಬೆನ್ನಲೆ ಯಲ್ಲಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮೈಸೂರು ಬಳಿ ರಸ್ತೆ ಅಪಘಾತಕ್ಕೆ 10 ಬಲಿ – ಪರಿಹಾರ ಘೋಷಿಸಿದ ಸಿಎಂ