ಕಾರು, ಲಾರಿ ಮುಖಾಮುಖಿ ಡಿಕ್ಕಿ – ಕಾಂಗ್ರೆಸ್ ಮುಖಂಡ ಸ್ಥಳದಲ್ಲೇ ಸಾವು

Public TV
1 Min Read
Raichur ACCIDENT

ರಾಯಚೂರು: ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು (Collision) ರಾಯಚೂರಿನ (Raichur) ಲಿಂಗಸುಗೂರಿನ ಕಾಂಗ್ರೆಸ್ ಮುಖಂಡ (Congress leader) 65 ವರ್ಷದ ಚನ್ನವೀರಪ್ಪ ಗೌಡ ಪಾಗದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಾಗಲಕೋಟೆಯ (Bagalkot) ಇಳಕಲ್ ಬಳಿಯ ತುಂಬಾ ಕ್ರಾಸ್‌ನಲ್ಲಿ ಅಪಘಾತ (Accident) ನಡೆದಿದೆ. ಲಿಂಗಸುಗೂರು ತಾಲೂಕಿನ ಆದಪೂರ ಗ್ರಾಮದ ಚನ್ನವೀರಪ್ಪ ಗೌಡ ಲಿಂಗಸುಗೂರಿನಿಂದ ಇಳಕಲ್ ಹೊರಟಿದ್ದಾಗ ದುರ್ಘಟನೆ ನಡೆದಿದೆ.

RAICHUR ACCIDENT 1

ಲಿಂಗಸುಗೂರು ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನವೀರಪ್ಪ ಗೌಡ ಪಾಗದ, ಲಿಂಗಸುಗೂರಿನ ಬನ್ನಿಗೋಳ ತಾಲೂಕ ಪಂಚಾಯತ್‌ಗೆ 2 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಖಾಸಗಿ ಬಸ್, ಇನ್ನೋವಾ ಭೀಕರ ಅಪಘಾತ- 10 ಮಂದಿ ದುರ್ಮರಣ

ಇಳಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಚನ್ನವೀರಪ್ಪ ಗೌಡ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಉದ್ಯೋಗ ಸಿಗದೆ ಖಿನ್ನತೆಗೊಳಗಾಗಿ ಯುವತಿ ಆತ್ಮಹತ್ಯೆ

Share This Article