ಉದ್ಯೋಗ ಸಿಗದೆ ಖಿನ್ನತೆಗೊಳಗಾಗಿ ಯುವತಿ ಆತ್ಮಹತ್ಯೆ

Public TV
1 Min Read
UDUPI GIRL

ಉಡುಪಿ: ಉದ್ಯೋಗ (Job) ಸಿಗದೆ ಬೇಸತ್ತು ಖಿನ್ನತೆಗೆ ಒಳಗಾಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಕಾಲ್ತೋಡು ಗ್ರಾಮದಲ್ಲಿ ನಡೆದಿದೆ.

ಕಾಲ್ತೋಡು ಗ್ರಾಮದ ಗೌತಮಿ (22) ಆತ್ಮಹತ್ಯೆಗೆ ಶರಣಾದ ಯುವತಿ. ಉಡುಪಿಯ ಖಾಸಗಿ ಕಾಲೇಜಿನಲ್ಲಿ ಎಂ ಕಾಮ್ (M.Com) ಮುಗಿಸಿ ಬ್ಯಾಂಕಿಂಗ್ ಪರೀಕ್ಷೆ (Banking Exam) ಹಾಗೂ ಇತರೆ ಕಂಪನಿ ನೇಮಕಾತಿಗೆ ಪರೀಕ್ಷೆ ಬರೆದಿದ್ದರೂ ಗೌತಮಿಗೆ ಉದ್ಯೋಗ ಸಿಕ್ಕಿರಲಿಲ್ಲ.

police jeep 1

ಮನನೊಂದು ಡೆತ್ ನೋಟ್ ಬರೆದಿಟ್ಟು ಮನೆಯ ಮೊದಲ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರಿಯಕರನಿಂದ 16 ವರ್ಷದ ಹುಡುಗಿಯ ಬರ್ಬರ ಹತ್ಯೆ

 

Share This Article