ದಾವಣಗೆರೆ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ವ್ಯಕ್ತಿಯೋರ್ವ ಸೇತುವೆ (Bridge) ಮೇಲಿನಿಂದ ಹಾರಿ ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.
ಆರ್‌ಟಿಐ ಕಾರ್ಯಕರ್ತ (RTI Activist) ಹರೀಶ್ ಹಳ್ಳಿ (34) ಸಾವನ್ನಪ್ಪಿದ ವ್ಯಕ್ತಿ. ದಾವಣಗೆರೆ ತಾಲೂಕಿನ ತೋಳಹುಣಸೆ (Tolahunase) ಬಳಿಯ ಸೇತುವೆಯ ಬಳಿ ಘಟನೆ ನಡೆದಿದ್ದು, ಪೊಲೀಸ್ ಜೀಪಿನಿಂದ ತಪ್ಪಿಸಿಕೊಂಡು ಸೇತುವೆ ಮೇಲಿನಿಂದ ಜಿಗಿದು ಹರೀಶ್ ಸಾವನ್ನಪ್ಪಿದ್ದಾನೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಕಬ್ಬಳ ಗ್ರಾಮದ ನಿವಾಸಿಯಾಗಿರುವ ಹರೀಶ್ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಸೈಟ್ ಅನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದ ಆರೋಪವನ್ನು ಎದುರಿಸುತ್ತಿದ್ದ. ಈ ಕುರಿತು ಪೊಲೀಸರು ಆತನ ಪತ್ನಿಯ ಊರಾದ ಚನ್ನಗಿರಿ ಕಾಕನೂರು ಗ್ರಾಮದಿಂದ ಆತನನ್ನು ಕರೆತರುತ್ತಿದ್ದರು. ಇದನ್ನೂ ಓದಿ: ಸೈಟ್ ವಿಚಾರಕ್ಕೆ ಗ್ರಾಮಪಂಚಾಯ್ತಿ ಸಿಬ್ಬಂದಿಯಿಂದ ಮಹಿಳೆಗೆ ಚಾಕು ಇರಿತ
ಭಾನುವಾರ ನಸುಕಿನ ಜಾವ 2:30ಕ್ಕೆ ಆತನನ್ನು ವಶಕ್ಕೆ ಪಡೆದು ಕರೆತರುವ ವೇಳೆ ಪೊಲೀಸ್ ಜೀಪಿನಿಂದ ತಪ್ಪಿಸಿಕೊಂಡು ಸೇತುವೆ ಮೇಲಿನಿಂದ ಹಾರಿದ್ದಾನೆ. ಸೇತುವೆ ಮೇಲಿನಿಂದ ಜಿಗಿದ ಪರಿಣಾಮ ಹರೀಶ್ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಬಸ್‌ನಲ್ಲಿ ಪ್ರಯಾಣಿಸುವಾಗ ಹೃದಯಾಘಾತ- ವೃದ್ಧೆ ಸಾವು
ಘಟನೆಯಿಂದ ಮೃತನ ಕುಟುಂಬಸ್ಥರು ಆಸ್ಪತ್ರೆ ಎದರು ಹೋರಾಟ ನಡೆಸುತ್ತಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಕರಣದ ವಿಚಾರವಾಗಿ ತನ್ನ ಪತಿಯನ್ನು ಕರೆದುಕೊಂಡು ಹೋಗಿ ಗಾಂಧಿನಗರ ಪೊಲೀಸ್ ಠಾಣೆಯ ಎಸ್‌ಐ ಕೃಷ್ಣಪ್ಪ ಹಾಗೂ ಇಬ್ಬರು ಪಿಸಿಗಳು ಸೇರಿ ಕೊಲೆ ಮಾಡಿದ್ದಾರೆ ಎಂದು ಹರೀಶ್ ಪತ್ನಿ ದೂರು ದಾಖಲಿಸಿದ್ದಾರೆ. ಈ ಕುರಿತು ದಾವಣಗೆರೆ ಎಸ್ಪಿ ಡಾ.ಕೆ. ಅರುಣ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು- ಕಾರಣ ಅದಲ್ಲ ಅಂತ ವೈದ್ಯರ ವಾದ