ರಾಗಿಣಿ ಐಎಎಸ್ ವರ್ಸಸ್ ಐಪಿಎಸ್: ಇದು ನೈಜ ಘಟನೆಯ ಚಿತ್ರ

Public TV
1 Min Read
ragini 4

ಕೆ.ಮಂಜು (K. ​​Manju) ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ನಿರ್ಮಿಸುತ್ತಿರುವ, ಸಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ ರಾಗಿಣಿ ದ್ವಿವೇದಿ (Ragini) ಪ್ರಮುಖ ಪಾತ್ರದಲ್ಲಿ ನಟಿಸಲಿರುವ ‘ರಾಗಿಣಿ ಐ ಪಿ ಎಸ್ ವರ್ಸಸ್ ಐ ಎ ಎಸ್’ ಚಿತ್ರ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. ಈ ಸಿನಿಮಾದ ಟೈಟಲ್ ಸಾಕಷ್ಟು ಕುತೂಹಲ ಮೂಡಿಸಿದೆ.

ragini

ಇದೊಂದು ನೈಜಘಟನೆ ಆಧಾರಿತ ಚಿತ್ರವಾಗಿದ್ದು, ರಾಗಿಣಿ ದ್ವಿವೇದಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾನ, ಧ್ವನಿ  ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಸಬಾಸ್ಟಿನ್ ಡೇವಿಡ್ (Sabastin David) ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ.  ಜನಪ್ರಿಯ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿರುತ್ತಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ಮಾಪಕ ಕೆ.ಮಂಜು ತಿಳಿಸಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

Ragini

ಈ ಸಿನಿಮಾದ ಟೈಟಲ್ ನಾನಾ ಚರ್ಚೆಗೂ ಕಾರಣವಾಗಿದೆ. ಐಎಎಸ್ ಮತ್ತು ಐಪಿಎಸ್ ಟೈಟಲ್ ಇರುವುದರಿಂದ ರಾಜ್ಯದಲ್ಲಿ ನಡೆದ ಇಬ್ಬರು ಅಧಿಕಾರಿಗಳ ಘಟನೆಯನ್ನು ಏನಾದರೂ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ಐಪಿಎಸ್ ಅಧಿಕಾರಿಯೊಬ್ಬರು ಐಎಎಸ್ ಅಧಿಕಾರಿಯ ವಿರುದ್ಧ ನಾನಾ ರೀತಿಯ ಆರೋಪಗಳನ್ನು ಮಾಡಿದ್ದರು. ಇದೇ ಸಿನಿಮಾದ ವಸ್ತುನಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Share This Article