ಜನ್ಮದಿನಾಂಕ ತಿದ್ದಿ ಆಧಾರ್ ಕಾರ್ಡ್ ಮಾಡಿಸಿದ ಪೋಷಕರು – ಬಾಲ್ಯವಿವಾಹ ತಡೆದು ಬಾಲಕಿಯ ರಕ್ಷಣೆ

Public TV
1 Min Read
raichur Child Marriage

ರಾಯಚೂರು: ಆಧಾರ್ ಕಾರ್ಡ್‌ನಲ್ಲಿ (Aadhaar Card) ಜನ್ಮದಿನಾಂಕವನ್ನು ತಿದ್ದಿ ಅಪ್ರಾಪ್ತ ಮಗಳ ಮದುವೆ (Child Marriage) ಮಾಡಿಸಲು ಹೊರಟಿದ್ದ ಪೋಷಕರನ್ನು ತಡೆದು ಬಾಲಕಿಯನ್ನು (Minor Girl) ರಕ್ಷಣೆ ಮಾಡಿರುವ ಘಟನೆ ರಾಯಚೂರು (Raichur) ಜಿಲ್ಲೆಯ ದೇವದುರ್ಗದ ಗಲಗ ಗ್ರಾಮದಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಪೊಲೀಸರ ತಂಡ ಬಾಲಕಿಯ ವಿವಾಹವನ್ನು ತಡೆದು ರಕ್ಷಣೆ ಮಾಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದ 16 ವರ್ಷದ ಬಾಲಕಿಗೆ ಮದುವೆ ನಿಶ್ಚಯವಾಗಿತ್ತು. ಗಲಗ ಗ್ರಾಮದ ಯುವಕ ವಿನೋದ್ ಕುಮಾರ್ ಜೊತೆ ನಡೆಯಬೇಕಿದ್ದ ಬಾಲಕಿಯ ಮದುವೆಯನ್ನು ಅಧಿಕಾರಿಗಳು ತಡೆದಿದ್ದಾರೆ. ಇದನ್ನೂ ಓದಿ: New Parliament Building – ಕರ್ನಾಟಕ ವಿಧಾನಸೌಧದ ಉದಾಹರಣೆ ನೀಡಿ ಕಾಂಗ್ರೆಸ್‌ಗೆ ಸಂಬಿತ್‌ ಪಾತ್ರ ತಿರುಗೇಟು

ಬಾಲಕಿಗೆ ಕೇವಲ 16 ವರ್ಷವಾಗಿದ್ದು ಆಧಾರ್ ಕಾರ್ಡ್‌ನಲ್ಲಿ 18 ವರ್ಷವಾಗಿರುವಂತೆ ತಿದ್ದಿ, ಮದುವೆ ನಿಶ್ಚಯಿಸಿದ್ದಾಗಿ ಆಕೆಯ ಪೋಷಕರು ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಕಾನೂನು ಮೀರಿ ಬಾಲಕಿಗೆ ಮದುವೆ ಮಾಡಿಸುವುದಿಲ್ಲ ಎಂದು ಪೋಷಕರಿಂದ ಅಧಿಕಾರಿಗಳು ಪತ್ರ ಬರೆಸಿಕೊಂಡಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಟೇಕಾಫ್‍ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ – ಸಮಯಪ್ರಜ್ಞೆ ಮೆರೆದ ಪೈಲೆಟ್

ಇದೀಗ ಬಾಲಕಿಯನ್ನು ರಾಯಚೂರಿನ ಬಾಲಮಂದಿರದಲ್ಲಿ ರಕ್ಷಣೆ ಮಾಡಲಾಗಿದೆ.

Share This Article