ಧೋನಿ ಫ್ಯಾನ್ಸ್‌ ಜೊತೆ ಕಿರಿಕ್‌ ತೆಗೆದ ಜಡೇಜಾ – RCB ತಂಡ ಸೇರಲು ಆಫರ್‌ ಕೊಟ್ರು ಫ್ಯಾನ್ಸ್‌

Public TV
2 Min Read
Ravindrasinh jadeja

ಚೆನ್ನೈ: ಗುಜರಾತ್‌ ಟೈಟಾನ್ಸ್‌ (GT) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಡುವಿನ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ 15 ರನ್‌ಗಳ ಜಯ ಸಾಧಿಸಿ, ಫೈನಲ್‌ಗೆ 10ನೇ ಬಾರಿಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ.

ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 172 ರನ್‌ ಗಳಿತ್ತು. ಈ ಗುರಿ ಬೆನ್ನತ್ತಿದ್ದ ಟೈಟಾನ್ಸ್‌ ನಿಗದಿತ ಓವರ್‌ಗಳಲ್ಲಿ 157 ರನ್‌ ಗಳಿಗೆ ಸರ್ವಪತನಕಂಡಿತು. ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ 22 ರನ್‌ಗಳ ಕೊಡುಗೆ ನೀಡಿದ್ದ ಜಡೇಜಾ (Ravindrasinh jadeja) ಬೌಲಿಂಗ್‌ನಲ್ಲಿ 4 ಓವರ್‌ಗಳಲ್ಲಿ ಕೇವಲ 18 ರನ್‌ ನೀಡಿ 2 ವಿಕೆಟ್‌ ಕಿತ್ತರು. ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಮೋಸ್ಟ್‌ ವ್ಯಾಲ್ಯುಯಬಲ್‌ ಪ್ರಶಸ್ತಿ ನೀಡಲಾಯಿತು. ಇದನ್ನೂ ಓದಿ: CSKvsGT: ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 2.5 ಕೋಟಿ ಜನರಿಂದ ವೀಕ್ಷಣೆ – ಎಲ್ಲಾ ದಾಖಲೆಗಳು ಉಡೀಸ್‌

CSKvsGT 1

ಮೋಸ್ಟ್ ವ್ಯಾಲ್ಯುಯಬಲ್ ಪ್ರಶಸ್ತಿಯ ಫೋಟೊವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಡೇಜಾ ‘ನಾನು ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ ಎಂಬುದು ಅಪ್‌ಸ್ಟಾಕ್ಸ್‌ಗೆ ಗೊತ್ತಿದೆ. ಆದರೆ ಕೆಲವು ಅಭಿಮಾನಿಗಳಿಗೆ ತಿಳಿದಿಲ್ಲ ಎಂದು ನಗುವಿನ ಎಮೋಜಿ ಹಾಕಿ ಬರೆದುಕೊಂಡಿದ್ದಾರೆ. ಹೀಗೆ ರವೀಂದ್ರ ಜಡೇಜಾ ಯಾಕೆ ಅಭಿಮಾನಿಗಳ ವಿರುದ್ಧವೇ ಬರೆದುಕೊಂಡಿದ್ದಾರೆ ಎಂದು ಅನೇಕರು ಗೊಂದಲಕ್ಕೀಡಾಗಿದ್ದಾರೆ. ಆದರೆ ಜಡೇಜಾ ತಮ್ಮದ್ದೇ ತಂಡದ ಅಭಿಮಾನಿಗಳನ್ನು ಕೆಣಕುವಂತೆ ಈ ರೀತಿ ಬರೆದುಕೊಂಡಿರುವುದು ಧೋನಿ ಫ್ಯಾನ್ಸ್‌ಗೆ ಬೇಸರ ತರಿಸಿದೆ. ಇದನ್ನೂ ಓದಿ: IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

GTvsCSK 8

ಹೌದು, ರವೀಂದ್ರ ಜಡೇಜಾ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ಮಾಡುವಾಗ ಸ್ಟೇಡಿಯಂನದಲ್ಲಿ ನೆರೆದಿರುವ ಧೋನಿ ಫ್ಯಾನ್ಸ್ ತಮ್ಮ ನೆಚ್ಚಿನ ಆಟಗಾರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಕಾರಣ ಧೋನಿ ಧೋನಿ ಎಂದು ಹಲವಾರು ಪಂದ್ಯಗಳಲ್ಲಿ ಕೂಗಿದ್ದರು. ಅಲ್ಲದೇ ಜಡೇಜಾ ವಿಕೆಟ್ ಬಿದ್ದ ಕೂಡಲೇ ಸಂಭ್ರಮಿಸಿದ್ದರು. ಇದರ ಬಗ್ಗೆ ಕಳೆದ ಪಂದ್ಯವೊಂದರ ನಂತರ ಸ್ವತಃ ಪ್ರತಿಕ್ರಿಯಿಸಿದ್ದ ರವೀಂದ್ರ ಜಡೇಜಾ ಧೋನಿ ಬ್ಯಾಟಿಂಗ್ ನೋಡಲು ನಾನು ಔಟ್‌ಆಗಲಿ ಅಂತಾನೇ ಕೇಳಿಕೊಳ್ಳುತ್ತಾರೆ ಎಂದು ನೇರವಾಗಿಯೇ ಹೇಳಿದ್ದರು. ಹೀಗಾಗಿ ಜಡೇಜಾ ನಾನು ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ ಎಂಬುದು ಅಪ್‌ಸ್ಟಾಕ್ಸ್‌ಗೆ ಗೊತ್ತಿದೆ. ಆದರೆ ಕೆಲವು ಅಭಿಮಾನಿಗಳಿಗೆ ತಿಳಿದಿಲ್ಲ ಅಂತಾ ಧೋನಿ ಫ್ಯಾನ್ಸ್‌ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದಾರೆ.

CSKvsGT 4

RCB ತಂಡಕ್ಕೆ ಆಹ್ವಾನ: ಜಡೇಜಾ ತಮ್ಮದೇ ತಂಡದ ಅಭಿಮಾನಿಗಳ ವಿರುದ್ಧ ತಿರುಗಿಬೀಳುತ್ತಿದ್ದಂತೆ ಆರ್‌ಸಿಬಿ ತಂಡದ ಫ್ಯಾನ್ಸ್‌ಗಳು ಜಡೇಜಾಗೆ ಆಹ್ವಾನ ಕೊಟ್ಟಿದ್ದಾರೆ. ನೀವು ಆರ್‌ಸಿಬಿ ತಂಡ ಸೇರಲು ಇದು ಸಕಾಲ. ನಮ್ಮ ಆರ್‌ಸಿಬಿ ತಂಡದಲ್ಲಿ ಬಂದು ಆಡಿ ಎಂದು ಟ್ವೀಟ್‌ ಮೂಲಕ ಆಹ್ವಾನ ಕೊಟ್ಟಿದ್ದಾರೆ.

Share This Article