ಕೊನೆಗೂ ಡಿಕೆಶಿಗೆ ಸಿಕ್ತು ಅದೃಷ್ಟದ ಮನೆ – ಕಾವೇರಿ ನಿವಾಸಕ್ಕೆ ಸಿಎಂ ಶಿಫ್ಟ್ – ಯಾರಿಗೆ ಯಾವ ಮನೆ?

Public TV
1 Min Read
DK Shivakumar 9

ಬೆಂಗಳೂರು: ಇಷ್ಟು ದಿನ ಸಿದ್ದರಾಮಯ್ಯ (siddaramaiah) ಅವರು ವಾಸವಿದ್ದ ಸರ್ಕಾರಿ ಬಂಗಲೆ ಕುಮಾರಕೃಪಾ (Kumarakrupa Guest House) ಅದೃಷ್ಟದ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಶಿಫ್ಟ್ ಆಗಲಿದ್ದಾರೆ.

ಸಿದ್ದರಾಮಯ್ಯ ಅವರು ಕಾವೇರಿ ನಿವಾಸಕ್ಕೆ (Kaveri House) ಶಿಫ್ಟ್ ಆದ ನಂತರ ಡಿಕೆ ಶಿವಕುಮಾರ್ ಇಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸಿಎಂ ಬೊಮ್ಮಾಯಿ ಅವರಿದ್ದ ಮನೆಯನ್ನು ಎಂ.ಬಿ ಪಾಟೀಲ್‌ಗೆ ನಿಗದಿ ಮಾಡಲಾಗಿದ್ದು, ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿದ್ದ ವಸತಿ ಗೃಹವನ್ನ ನೂತನ ಸಚಿವ ಪ್ರಿಯಾಂಕ್ ಖರ್ಗೆಗೆ ನಿಗದಿ ಮಾಡಲಾಗಿದೆ. ಇದನ್ನೂ ಓದಿ: 6 ತಿಂಗಳಲ್ಲಿ ಏನು ಮಾಡಿದ್ದೀರಿ- ಅಧಿಕಾರಿಗಳಿಗೆ ಸಿದ್ದರಾಮಯ್ಯ ಪ್ರಶ್ನೆ

Kumarakrupa Guest House

ಸಿದ್ದರಾಮಯ್ಯ ಅವರ ಅದೃಷ್ಟದ ನಿವಾಸ ಕುಮಾರಕೃಪಾ ತನಗೆ ಬೇಕೆಂಬ ಬೇಡಿಕೆಯನ್ನ ಡಿ.ಕೆ ಶಿವಕುಮಾರ್ ಇಟ್ಟಿದ್ದರು. ಅಂದುಕೊಂಡಂತೆ ನೂತನ ಡಿಕೆಶಿ ಅವರಿಗೆ ಸಿದ್ದರಾಮಯ್ಯ ಅವರಿದ್ದ ಅದೃಷ್ಟದ ಮನೆ ಸಿಕ್ಕಿದೆ. ಇದನ್ನೂ ಓದಿ: Exclusive: ಸಿದ್ದು ಅದೃಷ್ಟದ ಮನೆಗೆ ಬೇಡಿಕೆ ಇರಿಸಿದ ಡಿಕೆಶಿ

ಸಿದ್ದರಾಮಯ್ಯ ಅವರು ಇದ್ದ ನಿವಾಸ ಅದೃಷ್ಟದ ಮನೆ ಎಂದು ಹೇಳಲಾಗಿತ್ತು. ಈ ಹಿಂದೆ ಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಅವರು ಇದೇ ನಿವಾಸದಲ್ಲಿದ್ದರು. 5 ವರ್ಷ ಆಡಳಿತ ಯಶಸ್ವಿಯಾಗಿ ಪೂರೈಸಿದ್ದರು. ಇದೀಗ ಅದೃಷ್ಟದ ಮನೆಯನ್ನ ಡಿ.ಕೆ ಶಿವಕುಮಾರ್ ಅವರಿಗೆ ನಿಗದಿ ಮಾಡಲಾಗಿದೆ.

DK Shivakumar 1 2

ಯಾರಿಗೆ – ಯಾವ ಮನೆ?

  • ಡಿ.ಕೆ ಶಿವಕುಮಾರ್ – ನಂ.1 ಕುಮಾರ ಕೃಪಾ ಈಸ್ಟ್, ಗಾಂಧಿಭವನ ರಸ್ತೆ
  • ಎಂ.ಬಿ ಪಾಟೀಲ್ – ನಂ.1, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ
  • ಕೆ.ಜೆ ಜಾರ್ಜ್ – ನಂ.2, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ
  • ಜಿ. ಪರಮೇಶ್ವರ್ – ನಂ.94/ಎ, 9ನೇ ಕ್ರಾಸ್, ಸದಾಶಿವನಗರ, ಆರ್‌ಎಂವಿ ಬಡಾವಣೆ
  • ಪ್ರಿಯಾಂಕ್ ಖರ್ಗೆ – ನಂ.4, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ

Share This Article