ಕೈ ಸನ್ನೆ ಮೂಲಕ ಡೇಟಿಂಗ್ ಬಗ್ಗೆ ಉತ್ತರಿಸಿದ ನಟಿ ಅದಿತಿ ರಾವ್ ಹೈದರಿ

Public TV
2 Min Read
Aditi Rao Hydari Siddharth

ಬೊಮ್ಮರಿಲ್ಲು ಖ್ಯಾತಿಯ ನಟ ಸಿದ್ದಾರ್ಥ್ ಮತ್ತು ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಡೇಟಿಂಗ್ ವಿಚಾರ ಮತ್ತೆ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿದೆ. ಇಬ್ಬರೂ ಒಟ್ಟಾಗಿ ಹಲವಾರು ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಸಿನಿಮಾವನ್ನೂ ಮಾಡಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಜಂಟಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಇಬ್ಬರೂ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲಿ ಅಲ್ಲಿ ಡೇಟಿಂಗ್ ವಿಚಾರವನ್ನು ಕೇಳಲಾಗುತ್ತದೆ. ಅವರು ಕೂಡ ಜಾಣ್ಮೆಯಿಂದಲೂ ಉತ್ತರಿಸುತ್ತಾರೆ.

siddharth 3

ಈವರೆಗೂ ಡೇಟಿಂಗ್ ವಿಚಾರವನ್ನು ಅಲ್ಲಗಳೆಯುತ್ತಲೇ ಬಂದಿರುವ ಈ ಜೋಡಿ ಇತ್ತೀಚೆಗೆ ಮಾತ್ರ ಸತ್ಯವನ್ನು ಒಪ್ಪಿಕೊಂಡಿದೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅದಿತಿ ರಾವ್ ಹೈದರಿ ಅವರಿಗೆ ಡೇಟಿಂಗ್ ಕುರಿತಾಗಿ ಪ್ರಶ್ನೆ ಮಾಡಿದಾಗ,  ಆ ಕುರಿತು ತಾವು ಏನೂ ಹೇಳುವುದಿಲ್ಲ ಎಂದು ಕೈ ಸನ್ನೆ ಮಾಡಿ ಹೇಳುವ ಮೂಲಕ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅದರಲ್ಲೂ ಜಾಣ ನಡೆ ಪ್ರದರ್ಶನ ಮಾಡಿದ್ದಾರೆ.

Siddharth 2

ಇತ್ತೀಚಿಗಷ್ಟೇ ತೆಲುಗು ನಟ ಶರ್ವಾನಂದ್ (Sharwanand) ಎಂಗೇಜ್‌ಮೆಂಟ್‌ಗೆ ಸಿದ್ಧಾರ್ಥ್- ಅದಿತಿ ಜೋಡಿಯಾಗಿ ಬಂದು ಶುಭಹಾರೈಸಿದ್ದರು. ಈ ಬೆನ್ನಲ್ಲೇ ಸಿದ್-ಅದಿತಿ ಡೇಟಿಂಗ್ ಸುದ್ದಿಗೆ ಸದ್ದು ಮಾಡಿತ್ತು. ಅಷ್ಟಕ್ಕೂ ಈ ಡೇಟಿಂಗ್ ಸುದ್ದಿ ನಿಜಾನಾ ಎಂಬುದಕ್ಕೆ ನಟಿ ಅದಿತಿ ರಾವ್ ಹೈದರಿ (Aditi Rao Hydari) ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದಾರೆ. ಇದನ್ನೂ ಓದಿ:ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ

siddharth 1

ನಟಿ ಅದಿತಿ- ಸಿದ್ಧಾರ್ಥ್ (Actor Siddarth) ಅವರು `ಮಹಾ ಸಮುದ್ರಂ’ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಸೆಟ್‌ನಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎನ್ನಲಾಗುತ್ತಿದೆ. 2021ರಿಂದ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂಬೈನಲ್ಲಿ ರೆಸ್ಟೋರೆಂಟ್‌ನಲ್ಲಿ ಸಾಕಷ್ಟು ಬಾರಿ ಈ ಜೋಡಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಇದೆ. ಸದ್ಯ ಟಿಟೌನ್ ಅಂಗಳದಲ್ಲಿ ಈ ವಿಚಾರ ಅನೇಕರ ಚರ್ಚೆಗೆ ಗ್ರಾಸವಾಗಿದೆ.

Siddharth 1

ಈ ಹಿಂದೆಯೂ ಅದಿತಿ ನಟನೆಯ `ತಾಜ್’ (Taj) ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅದಿತಿಗೆ ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ (Dating) ಬಗ್ಗೆ ಕೇಳಲಾಗಿತ್ತು. ನನಗೆ ತುಂಬಾ ಹಸಿವಾಗುತ್ತಿದೆ. ಹಾಗಾಗಿ ನಾನು ಹೋಗಿ ತಿನ್ನುತ್ತೇನೆ ಎಂದು ನಟಿ ಏನೂ ಹೇಳಲದೇ ಹೊರಟಿದ್ದರು. ಈ ಪ್ರಶ್ನೆಗೆ ಊಟದ ನೆಪ ಹೇಳುವ ಮೂಲಕ ನಟಿ ಜಾರಿಕೊಂಡಿದ್ದರು.

Share This Article