ಮಸೀದಿಗೆ ನುಗ್ಗಿ ಕಂಪ್ಯೂಟರ್, ಕ್ಯಾಮೆರಾ ಹೊತ್ತೊಯ್ದ ಚೋರ – 3 ತಿಂಗಳಲ್ಲಿ 3ನೇ ಕಳ್ಳತನ

Public TV
1 Min Read
hassan 2

ಹಾಸನ: ಉಪಕರಣಗಳ ಸಮೇತ ಮಸೀದಿಗೆ (Mosque) ನುಗ್ಗಿದ ಖತರ್ನಾಕ್ ಕಳ್ಳ (Thief) ಕಚೇರಿಯಲ್ಲಿದ್ದ ಕಂಪ್ಯೂಟರ್, ಕ್ಯಾಮೆರಾ ಹೊತ್ತೊಯ್ದಿರುವ ಘಟನೆ ಹಾಸನ (Hassana) ನಗರದ ಶರೀಫ್ ಕಾಲೋನಿಯಲ್ಲಿ ನಡೆದಿದೆ.

ತಡರಾತ್ರಿ ಖುಬಾ ಮಸೀದಿಗೆ ಬಂದಿರುವ ಕಳ್ಳ ಕೆಲಕಾಲ ಹೊಂಚು ಹಾಕಿದ್ದಾನೆ. ನಂತರ ಗೇಟ್ ಹಾರಿ ಒಳಬಂದಿರುವ ಚೋರ ಮಸೀದಿಯ ಮುಖ್ಯದ್ವಾರದ ಬೀಗ ಮುರಿದು ಹುಂಡಿ ಕದಿಯಲು ಯತ್ನಿಸಿದ್ದಾನೆ. ಇದು ಸಾಧ್ಯವಾಗದಿದ್ದಾಗ ಮಸೀದಿಯ ಕಚೇರಿಯ ಬೀಗ ಮುರಿದು ಒಳ್ಳನುಗ್ಗಿದ್ದಾನೆ. ಅಲ್ಲಿದ್ದ ಕಂಪ್ಯೂಟರ್ ಹಾಗೂ ಕೆನಾನ್ ಕ್ಯಾಮೆರಾವನ್ನು ಕದ್ದೊಯ್ದಿದ್ದಾನೆ.

hassan 1

ಕಳ್ಳತನದ ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 3 ಲಕ್ಷ ರೂ. ಬೆಲೆಬಾಳುವ ಕಂಪ್ಯೂಟರ್, ಕ್ಯಾಮೆರಾ ಕಳುವಾಗಿದೆ. ರಾತ್ರಿ ಮಳೆ ಬರುತ್ತಿದ್ದ ಕಾರಣ ಪ್ರಮುಖ ಪತ್ರಿಕೆಯ ಛಾಯಾಗ್ರಾಹಕ ಅತೀಕ್ ಉರ್ ರೆಹಮಾನ್ ತಮ್ಮ ಕ್ಯಾಮೆರಾವನ್ನು ಮಸೀದಿಯ ಕಚೇರಿಯಲ್ಲಿಟ್ಟು ಮನೆಗೆ ತೆರಳಿದ್ದರು. ಆ ಕ್ಯಾಮೆರಾದೊಂದಿಗೆ ಕಳ್ಳ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: 3 ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ವಂದೇ ಭಾರತ್ ರೈಲಿಗೆ ಮಳೆಯಿಂದ ಹಾನಿ – ಸಂಚಾರ ಸ್ಥಗಿತ

ಕಳೆದ 3 ತಿಂಗಳ ಅವಧಿಯಲ್ಲಿ ಇದೇ ಮಸೀದಿಯಲ್ಲಿ 3 ಬಾರಿ ಕಳ್ಳತನವಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ

Share This Article