ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ (Bengaluru Rain) ಆರ್ಭಟ ಜೋರಾಗಿದ್ದು ಇಂದು, ನಾಳೆ ಹಾಗೂ ನಾಡಿದ್ದು ಒಟ್ಟು ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಪಂಜಾಬ್‍ನ ವಿದರ್ಭದಲ್ಲಿ ಸುಳಿಗಾಳಿ ಕಾಣಿಸಿಕೊಂಡಿದೆ. ಈ ಸುಳಿಗಾಳಿ ವಿದರ್ಭದಿಂದ ತಮಿಳುನಾಡಿನತ್ತ ಸಾಗುತ್ತಿದೆ. ಅಂದರೆ ಉತ್ತರ ಒಳನಾಡಿನಿಂದ ದಕ್ಷಿಣ ಒಳನಾಡಿನತ್ತ ಸುಳಿಗಾಳಿ ಸಾಗುತ್ತಿದೆ. ಹೀಗಾಗಿ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಇದನ್ನೂ ಓದಿ: ಯಾರೂ ವಿದ್ಯುತ್ ಬಿಲ್ ಕಟ್ಬೇಡಿ, ಬಿಲ್ ಬಂದ್ರೆ ಸಿಎಂಗೆ ಕಳ್ಸಿ – ಸಿ.ಟಿ ರವಿ
ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು, ಚಿತ್ರದುರ್ಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ ಮೂರು ದಿನ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆ ಪ್ರಮಾಣ ಇರಲಿದೆ. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಗುಡುಗು ಮಿಂಚಿನ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ (Weather Department) ಎಚ್ಚರಿಕೆ ನೀಡಿದೆ.
ಭಾನುವಾರ ಸಂಜೆ ವೇಳೆಗೆ ಬೆಂಗಳೂರಲ್ಲಿ ಸುರಿದ ಭಾರೀ ಮಳೆ, ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಒಂದು ಬಲಿ ಪಡೆದಿದೆ. ನಗರದ ಹಲವೆಡೆ ಮನೆ, ಕಾಂಪೌಂಡ್ ಕುಸಿದಿದೆ.
ಎಲ್ಲಿ ಎಷ್ಟು ಮಳೆಯಾಗಿದೆ?
ರಾಜಮಹಲ್ ಗುಟ್ಟಳ್ಳಿ – 65.50 ಮಿ.ಮೀ.
ಕೊಟ್ಟಿಗೆಪಾಳ್ಯ – 54 ಮಿ.ಮೀ.
ನಾಗಪುರ – 49 ಮಿ.ಮೀ.
ನಂದಿನಿ ಲೇಔಟ್ – 48 ಮಿ.ಮೀ.
ಪುಲಿಕೇಶಿ ನಗರ – 44 ಮಿ.ಮೀ.
ರಾಜಾಜಿನಗರ – 37 ಮಿ. ಮೀ.
ಕೆ.ಆರ್ ಪುರಂ – 36ಮಿ.ಮೀ.