ಬೆಂಗಳೂರು: ಹೃದಯಾಘಾತಕ್ಕೀಡಾಗಿ ನಿಧನರಾದ ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ (Dr. Bhujanga Shetty) ಯವರ ಕಣ್ಣುಗಳು ಇಬ್ಬರ ಬಾಳಿಗೆ ಬೆಳಕಾಗಿದೆ.
ಲಕ್ಷಾಂತರ ಕಣ್ಣುಗಳನ್ನ ದಾನ ಮಾಡುವ ಮೂಲಕ ನೇತ್ರದಾನ (Eye Donate) ದ ಕ್ರಾಂತಿ ಮಾಡಿದ್ದ ನೇತ್ರ ತಜ್ಞರಿಂದಲೇ ಇದೀಗ ನೇತ್ರದಾನವಾಗಿದೆ. ಬದುಕಿದ್ದಾಗ ಲಕ್ಷಾಂತರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಅಂಧಕಾರವನ್ನ ನೀಗಿಸಿದ್ದರು.
ಶುಕ್ರವಾರ ತಡರಾತ್ರಿ ಡಾ. ರಾಜ್ ಕುಮಾರ್ ಕಣ್ಣಿನ ಬ್ಯಾಂಕ್ ಗೆ ನೇತ್ರದಾನ ಮಾಡಲಾಗಿದೆ. ನೇತ್ರದಾನ ಮಾಡುವ ಮೂಲಕ ಭುಜಂಗ ಶೆಟ್ಟಿಯವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇದನ್ನೂ ಓದಿ: ನಾರಾಯಣ ನೇತ್ರಾಲಯ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ. ಭುಜಂಗಶೆಟ್ಟಿ ಇನ್ನಿಲ್ಲ
ನಿನ್ನೆ ಸಂಜೆ 7:30 ರ ವೇಳೆಗೆ ಮನೆಯಲ್ಲಿದ್ದಾಗ ಡಾ. ಭುಜಂಗ ಶೆಟ್ಟಿಯವರಿಗೆ ಹೃದಯಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.