ಮದುವೆಗೂ ಮುನ್ನವೇ ಪ್ರೆಗ್ನೆಂಟ್ ಆಗಿದ್ದರ ಬಗ್ಗೆ ನೇಹಾ ಧೂಪಿಯಾ ಮಾತು

Public TV
1 Min Read
neha dhupia

ಬಾಲಿವುಡ್ ಬ್ಯೂಟಿ ನೇಹಾ ಧೂಪಿಯಾ ಇದೀಗ ಮದುವೆಯಾಗಿ 8 ವರ್ಷಗಳ ಬಳಿಕ ತೆರೆ ಹಿಂದಿನ ತಮ್ಮ ಮ್ಯಾರೇಜ್ ಸ್ಟೋರಿಯನ್ನ ಬಿಚ್ಚಿಟ್ಟಿದ್ದಾರೆ. ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರ ಬಗ್ಗೆ ನಟಿ ಮನಬಿಚ್ಚಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

neha

ಹಿಂದಿ ಸಿನಿಮಾರಂಗದಲ್ಲಿ ನೇಹಾ ಧೂಪಿಯಾ (Neha Dhupia) ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಮಿಂಚಿದ್ದಾರೆ. ಸಿನಿಮಾ ಕೆರಿಯರ್‌ನಲ್ಲಿ ಬೇಡಿಕೆ ಇರೋವಾಗಲೇ ದಾಂಪತ್ಯ ಜೀವನಕ್ಕೆ (Wedding) ನೇಹಾ ಕಾಲಿಟ್ಟಿದ್ದರು. ಅಷ್ಟೊಂದು ಗಡಿ ಬಿಡಿಯಲ್ಲಿ ಮದುವೆಯಾಗಿದ್ಯಾಕೆ.? ಎಂದು ಮಾತನಾಡಿದ್ದಾರೆ.

nehaa

ಬಹುಬೇಡಿಕೆಯ ನಟಿಯಾಗಿದ್ದಾಗಲೇ ನೇಹಾ ಧೂಪಿಯಾ, ಅಂಗದ್ ಬೇಡಿ (Angad Bedi) ಅವರನ್ನು ಮೇ 10, 2018ರಲ್ಲಿ ಮದುವೆಯಾದರು. ನೇಹಾ ಸಿಖ್ ಸಂಪ್ರದಾಯದಂತೆ ಎರಡು ಕುಟುಂಬಗಳ ಸಮ್ಮುಖದಲ್ಲಿ ಮದುವೆಯಾದರು. ಮದುವೆಗೂ ಮುನ್ನವೇ ತಾನು ಪ್ರೆಗ್ನೆಂಟ್ ಆಗಿದ್ದೆ, ಹಾಗಾಗಿ ಆತುರದಲ್ಲಿ ಮದುವೆಯಾಗುವ ಸಂದರ್ಭ ಎದುರಾಯಿತು ಎಂದಿದ್ದಾರೆ. ಇದನ್ನೂ ಓದಿ:ತಾಯ್ತನದ ಫೋಟೋಶೂಟ್ ಹಂಚಿಕೊಂಡ ‘ರಾಧಾ ಕಲ್ಯಾಣ’ ನಟಿ ರಾಧಿಕಾ ರಾವ್

neha dhupia 2

ಮದುವೆಯಾದ ಕೆಲವೇ ದಿನಗಳಲ್ಲಿ ತಾನು ಪ್ರೆಗ್ನೆಂಟ್ ಆಗಿರುವ ಬಗ್ಗೆ ಅನೌನ್ಸ್ ಮಾಡಿದ್ದೆ, ಬಳಿಕ ಸಾಕಷ್ಟು ಟ್ರೋಲ್- ಟೀಕೆಗೆ ಒಳಗಾಗಿದ್ದೆ ಎಂದು ಮಾತನಾಡಿದ್ದಾರೆ. ಆ ಸಮಯದಲ್ಲಿ ನನ್ನ ಪೋಷಕರು 2 ದಿನದಲ್ಲಿ ಮದುವೆಯಾಗಬೇಕು ಎಂದು ತಾಕೀತು ಮಾಡಿರೋದಾಗಿ ಸಂದರ್ಶನವೊಂದರಲ್ಲಿ ನೇಹಾ ಬಾಯ್ಬಿಟ್ಟಿದ್ದಾರೆ. ಬಳಿಕ 72 ಗಂಟೆಯಲ್ಲಿ ನನ್ನ – ಅಂಗದ್‌ ಮದುವೆ ಆಪ್ತರ ಸಮ್ಮುಖದಲ್ಲಿ ನೆರವೇರಿತ್ತು.

Share This Article