‘ದಿ ಕೇರಳ ಸ್ಟೋರಿ’ ತಂಡಕ್ಕೆ ಆಘಾತ: ಆಸ್ಪತ್ರೆಗೆ ದಾಖಲಾದ ನಿರ್ದೇಶಕ, ನಟಿ

Public TV
1 Min Read
Sudipto Sen Adah Sharma

ಒಂದು ಕಡೆ ಯಶಸ್ಸಿನ ಮೆಟ್ಟಿಲು ಏರುತ್ತಲೇ ಸಾಗುತ್ತಿದೆ ದಿ ಕೇರಳ ಸ್ಟೋರಿ (The Kerala Story), ಮತ್ತೊಂದು ಕಡೆ ತಂಡಕ್ಕೆ ಆಘಾತವಾಗಿದೆ (Accident). ಚಿತ್ರದ ಸಕ್ಸಸ್ ಸಂಭ‍್ರಮದಲ್ಲಿ ಭಾಗಿಯಾಗಲು ಚಿತ್ರತಂಡ ಪ್ರಯಾಣ ಮಾಡುತ್ತಿದ್ದು, ಈ ಸಂದರ್ಭದಲ್ಲಿ ರಸ್ತೆ ಅಪಘಾತವಾಗಿ ನಿರ್ದೇಶಕ ಸುದೀಪ್ರೋ ಸೇನ್ (Sudeepro Sen) ಹಾಗೂ ನಾಯಕಿ ಅದಾ ಶರ್ಮಾ(Adah Sharma)  ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ (Hospital)ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

The Kerala Story 5

ಮುಂಬೈನ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ನಿರ್ದೇಶಕ ಹಾಗೂ ನಟಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಅಂದುಕೊಂಡಂತೆ ಆಗಿದ್ದರೆ ನಿನ್ನೆ ಚಿತ್ರತಂಡವು ಮುಂಬೈನ ಕಾರ್ಯಕ್ರಮ ಮುಗಿಸಿ ತೆಲಂಗಾಣದ ಕರೀಂ ನಗರಕ್ಕೆ ತೆರಳಬೇಕಿತ್ತು. ತುರ್ತು ಆರೋಗ್ಯದ ಸಮಸ್ಯೆಯಿಂದ ಹೋಗಲು ಆಗುತ್ತಿಲ್ಲವೆಂದು ನಿರ್ದೇಶಕರು ತಿಳಿಸಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

The Kerala Story 4

ಅಪಘಾತವನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದ್ದು, ನಾನಾ ಗೊಂದಲಗಳನ್ನು ಮೂಡಿಸಿದೆ. ಇದೊಂದು ಪೂರ್ವ ನಿಯೋಜಿತ ಅಪಘಾತ ಎಂದು ಕೆಲವರು ಗಾಳಿ ಸುದ್ದಿ ಹಬ್ಬಿಸಲು ರೆಡಿಯಾಗಿದ್ದರು. ಆದರೆ, ಇದಕ್ಕೆ ಸ್ವತಃ ನಿರ್ದೇಶಕರೇ ಬ್ರೇಕ್ ನೀಡಿದ್ದಾರೆ. ಗಾಬರಿ ಪಡುವಂಥದ್ದು ಏನೂ ಆಗಿಲ್ಲ. ನಾವೆಲ್ಲರೂ ಚೆನ್ನಾಗಿದ್ದೇವೆ. ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

The Kerala Story 2

ನಿರ್ದೇಶಕರು ಹೇಳಿದ ಮಾತಿಗೂ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗೂ ಹೊಂದಾಣಿಕೆ ಆಗದೇ ಇರುವ ಕಾರಣದಿಂದಾಗಿ ಇನ್ನೂ ಅಭಿಮಾನಿಗಳು ಆತಂಕದಲ್ಲೇ ಇದ್ದಾರೆ. ನಿಜವಾಗಿಯೂ ಅಪಘಾತವಾಗಿದೆಯಾ? ಅಥವಾ ತುರ್ತು ಆರೋಗ್ಯ ಸಮಸ್ಯೆ ಎಂದರೆ ಏನು? ಎನ್ನುವ ಕುರಿತು ನಿರ್ದೇಶಕರು ಸ್ಪಷ್ಟತೆ ನೀಡಬೇಕಿದೆ. ಈ ನಡುವೆ ಇಂದಿನಿಂದ ಮತ್ತೆ ಪ್ರಚಾರದಲ್ಲಿ ತೊಡಗುವುದಾಗಿಯೂ ಚಿತ್ರತಂಡ ಹೇಳಿಕೊಂಡಿದೆ. ಈ ಸುದ್ದಿಗೆ ಇವತ್ತು ಸ್ಪಷ್ಟತೆ ಸಿಗಬಹುದು.

Share This Article