ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ಸಿನಿಮಾಗೆ ಸಂಜನಾ ಆನಂದ್ ನಾಯಕಿ?

Public TV
2 Min Read
Sanjana Anand 5

ಮೊನ್ನೆಯಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ಮುಧೋಳ್’ (Mudhol) ಸಿನಿಮಾಗೆ ಮುಹೂರ್ತ ನಡೆದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಕೂಡ ಶುರುವಾಗಿದೆ. ರವಿಚಂದ್ರನ್ ಪುತ್ರ ವಿಕ್ರಮ್ (Vikram Ravichandran) ಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು. ಬಲ್ಲ ಮೂಲಗಳ ಪ್ರಕಾರ ಸಂಜನಾ ಆನಂದ್ (Sanjana Anand) ಈ ಸಿನಿಮಾಗೆ ನಾಯಕಿ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಚಿತ್ರತಂಡ ಮಾಹಿತಿ ನೀಡದೇ ಇದ್ದರೂ, ಸಂಜನಾ ಅಂತಿಮ ಎನ್ನುವ ಮಾತು ಕೇಳಿ ಬರುತ್ತಿದೆ.

Sanjana Anand 4

ದುನಿಯಾ ವಿಜಯ್ ನಟನೆಯ ಸಲಗ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಸಂಜನಾ ಆನಂದ್, ಕೆಮಿಸ್ಟ್ರಿ ಅಫ್ ಕರಿಯಪ್ಪ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದವರು. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇದೀಗ ಮುಧೋಳ್ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಇದೆ. ಸದ್ಯದಲ್ಲೇ ಈ ಕುರಿತು ಮಾಹಿತಿ ಹೊರಬೀಳಬಹುದು.

Sanjana Anand 3

ಶೂಟಿಂಗ್ ವೇಳೆ ಅವಘಡ

ಕನ್ನಡದ ಹೆಸರಾಂತ ಸಾಹಸ ನಿರ್ದೇಶಕ ರವಿವರ್ಮ ಪೆಟ್ಟು ಮಾಡಿಕೊಂಡಿದ್ದಾರೆ. ವಿಕ್ರಮ್ ರವಿಚಂದ್ರನ್ ನಟನೆಯ ಮುಧೋಳ್ ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ನಡೆದಿದ್ದು, ಸಾಹಸ ದೃಶ್ಯಕ್ಕಾಗಿ ಕಟ್ಟಿದ ರೋಪ್ ಹರಿದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

Sanjana Anand 2

ವಿಕ್ರಮ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಸಾಕಷ್ಟು ಸಾಹಸ ಸನ್ನಿವೇಶಗಳನ್ನು ಚಿತ್ರಕ್ಕಾಗಿ ಕಂಪೋಸ್ ಮಾಡಲಾಗಿದೆಯಂತೆ. ಸಾಮಾನ್ಯವಾಗಿ ಕಷ್ಟದ ಸ್ಟಂಟ್ ಗಳನ್ನೇ ಕಂಪೋಸ್ ಮಾಡುವ ರವಿವರ್ಮ, ಈ ಸಿನಿಮಾದಲ್ಲೂ ಅಂಥದ್ದೊಂದು ದೃಶ್ಯವನ್ನು ಕಂಪೋಸ್ ಮಾಡಿದ್ದರಂತೆ. ಈ ದೃಶ್ಯವನ್ನು ಚಿತ್ರೀಕರಿಸುವಾಗ ಅವರಿಗೆ ಗಾಯವಾಗಿದೆ.

Sanjana Anand 1

ಆತಂಕ ಪಡುವಂತಹ ಘಟನೆ ಅದಲ್ಲವಾದರೂ, ರವಿವರ್ಮ ಪದೇ ಪದೇ ಇಂತಹ ಘಟನೆಗಳಿಗೆ ಸಾಕ್ಷಿ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಸ್ತಿಗುಡಿ ಸಿನಿಮಾದಲ್ಲೂ ದುರ್ಘಟನೆ ನಡೆದಿತ್ತು. ಮೊನ್ನೆಯಷ್ಟೇ ಜೋಗಿ ಪ್ರೇಮ್ ನಿರ್ದೇಶನ ಕೇಡಿ ಸಿನಿಮಾದಲ್ಲೂ ನಟರೊಬ್ಬರು ಗಾಯ ಮಾಡಿಕೊಂಡಿದ್ದರು. ಈ ಎರಡು ಚಿತ್ರಗಳಿಗೂ ಇವರೇ ಸಾಹಸ ನಿರ್ದೇಶಕರು.

Sanjana Anand

ಮುಧೋಳ್ ಸಿನಿಮಾ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಪ್ರಧಾನ ಸಾಹಸಮಯ ಸನ್ನಿವೇಶಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದಾರೆ. ಇದೊಂದು ಆಕ್ಷನ್ ಸಿನಿಮಾವಾಗಿದ್ದು, ಕಳೆದ ಒಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ.

Share This Article