ದೇವೇಗೌಡರು ನಮ್ಮ ತಂದೆ ಆಗಿದ್ರೆ ಕೂತಿದ್ದ ಕಡೆ ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ: ಚಲುವರಾಯಸ್ವಾಮಿ

Public TV
1 Min Read
Chaluvaraya Swamy

ಮಂಡ್ಯ: ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು (HD Devegowda) ನಮ್ಮ ತಂದೆ ಆಗಿದ್ರೆ ಕೂತಿದ್ದ ಕಡೆ ಬಹಳ ಸುಖದ ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ ಎನ್ನುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ (HD Kumaraswamy) ಶಾಸಕ ಚಲುವರಾಯಸ್ವಾಮಿ (Chaluvaraya Swamy) ಕುಟುಕಿದ್ದಾರೆ.

ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಮಾತನಾಡಿದ ಅವರು, ಹೆಚ್.ಡಿ.ದೇವೇಗೌಡರು ನನ್ನ ವಿರುದ್ಧ ಏನು ಮಾತನಾಡಿಲ್ಲ, ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರನ್ನು ಈ ವಯಸ್ಸಿನಲ್ಲಿ ಆರೋಗ್ಯದ ಸಮಸ್ಯೆಯ ನಡುವೆ ಸುತ್ತಾಡಿಸಿದ್ದು ತಪ್ಪು. ಅವರು ಕೂತಿರುವ ಕಡೆ ಆಶೀರ್ವಾದ ತೆಗೆದುಕೊಂಡು ಚುನಾವಣೆ ಮಾಡಬೇಕಿತ್ತು, ರಾಜ್ಯ ಸುತ್ತಿದ್ದು ಸರಿಯಲ್ಲ. ಅವರನ್ನು ಸುತ್ತಿಸಿದವರಿಗೆ ದೇವರು ಬುದ್ಧಿಕೊಡಲಿ ಎಂದರು. ಇದನ್ನೂ ಓದಿ: ಬಿಜೆಪಿ ಸೋಲಿಗೆ ವ್ಯಂಗ್ಯವಾಡಿದ ಕಾಂಗ್ರೆಸ್ಸಿಗರಿಗೆ ಬಿ.ಎಲ್ ಸಂತೋಷ್ ಹೊಸ ಸವಾಲ್

HDDEVEGOWDA

ಹೆಚ್‌ಡಿಡಿ ಅವರಿಂದ ಉಪಯೋಗ ಪಡೆದುಕೊಂಡು ಎಂಎಲ್‌ಎ, ಮಂತ್ರಿ, ಮುಖ್ಯಮಂತ್ರಿ ಎಲ್ಲ ಖಾತೆ ಅನುಭವಿಸಿದ್ದಾರೆ. ಈಗಲೂ ಅವರನ್ನು ಬಿಡಲು ತಯಾರು ಇಲ್ಲ . ನಮಗೆ ಇಂತಹ ವಯಸ್ಸಿನಲ್ಲಿ ನಮ್ಮ ತಂದೆ ನೋಡಿಕೊಳ್ಳುವ ಭಾಗ್ಯ ಸಿಗಲಿಲ್ಲ. ನಾನು ಆಗಿದ್ರೆ ಅವರು ಕೂತಿದ್ದ ಕಡೆ ಬಹಳ ಸುಖದ ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ ಎನ್ನುವ ಮೂಲಕ ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಕುಟುಕಿದ್ದಾರೆ. ಇದನ್ನೂ ಓದಿ: ಸೋಮವಾರ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್ ರಾಜೀನಾಮೆ?

Share This Article