ನನ್ನ ಪತಿ ಹಿಂದೂ, ನಾನಿನ್ನೂ ಮುಸ್ಲಿಂ : ಮತ್ತೆ ಗುಡುಗಿದ ಖುಷ್ಭೂ

Public TV
1 Min Read
kushboo 1

ಬಾಲಿವುಡ್ ಚಿತ್ರೋದ್ಯಮದ ಬಗ್ಗೆ ಸದಾ ಕೊಂಕುಗಳನ್ನು ಬರೆಯುವ ಮತ್ತು ತನ್ನದೇ ಆದ ರೀತಿಯಲ್ಲಿ ಪ್ರಶ್ನೆ ಮಾಡುವ ಕೆ.ಆರ್.ಕೆ ಅಲಿಯಾಸ್ ಕಮಾಲ್ ಆರ್ ಖಾನ್ (Kamal Khan), ಈ ಬಾರಿ ನಟಿ ಖುಷ್ಬೂ ಬೆನ್ನುಬಿದ್ದಿದ್ದಾರೆ. ಖುಷ್ಭೂ ಮದುವೆ ಕುರಿತು ಮತ್ತು ಅವರ ನಿಜವಾದ ಹೆಸರಿನ ಕುರಿತು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಸ್ವತಃ ಖುಷ್ಭೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

kushboo

ಖುಷ್ಭೂ (Khushbhu) ಅವರ ಮದುವೆ ಮತ್ತು ಮತಾಂತರ (Conversion) ಕುರಿತಾಗಿ ಪ್ರಶ್ನೆ ಮಾಡಿರುವ ಕೆ.ಆರ್.ಕೆ, ‘ನೀವು ಹಿಂದೂ (Hindu) ಧರ್ಮಕ್ಕೆ ಮತಾಂತಗೊಂಡಿದ್ದೀರಾ? ಮತಾಂತರ ಆದ ನಂತರ ನಿಮ್ಮ ಹೆಸರನ್ನು ಖುಷ್ಭೂ ಅಂತ ಬದಲಾಯಿಸಿಕೊಂಡಿದ್ದೀರಾ’ ಎಂದು ಕೇಳಿದ್ದಾರೆ. ನಖತ್ ಎಂದಿದ್ದ ನಿಮ್ಮ ಹೆಸರು ಖುಷ್ಣೂ ಅಂತ ಬದಲಾಗಿದ್ದು ಯಾವಾಗ ಎಂದೂ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ

kushboo sundar

ಕಮಾಲ್ ಕೇಳಿದ ಪ್ರಶ್ನೆಗೆ ಖುಷ್ಭೂ ಉತ್ತರಿಸಿದ್ದು, ‘ನೀವು ನನ್ನ ಹೆಸರು ನಿಖಿತ್ ಎಂದು ಬರೆದಿದ್ದೀರಿ. ಆದರೆ, ನನ್ನ ಹೆಸರು ನಖತ್. ಈ ಹೆಸರಿನ ಅರ್ಥ ಖುಷ್ಭೂ ಅಂತಾನೆ. ಖುಷ್ಭೂ ಅಂತ ಹೆಸರಿಟ್ಟಿದ್ದು ಬಿ.ಆರ್.ಚೋಪ್ರಾ ಅವರು. ನಿಮಗೆ ವಿಶೇಷ ಮದುವೆ ಕಾಯ್ದೆ ಬಗ್ಗೆ ಗೊತ್ತಾ? ಆ ಕಾಯ್ದೆ ಅಡಿ ಮದುವೆ ಆಗಿದ್ದೇನೆ. ನನ್ನ ಗಂಡ ಹಿಂದೂ ಆಗಿ, ನಾನು ಮುಸ್ಲಿಂ (Muslim) ಆಗಿಯೇ ಇದ್ದೇನೆ. ಗಂಡ ನನ್ನ ಅರ್ಧ ಜೀವ. ಹಾಗಾಗಿ ಅವರ ಹೆಸರು ಸೇರಿಸಿಕೊಂಡಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ.

kushboo sundar

ಧರ್ಮ ಮತ್ತು ಮದುವೆ (Marriage) ವಿಚಾರವಾಗಿ ಖುಷ್ಭೂಗೆ ಇತ್ತೀಚಿನ ದಿನಗಳಲ್ಲಿ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಶ್ನೆ ಕೇಳಿದವರಿಗೆಲ್ಲ ಬೋಲ್ಡ್ ಆಗಿಯೇ ಉತ್ತರ ನೀಡುತ್ತಿದ್ದಾರೆ ಖುಷ್ಭೂ. ಯಾವುದೇ ವಿಷಯವನ್ನೂ ಅವರು ಮುಚ್ಚಿಡದೇ ಎಲ್ಲವೂ ಹಂಚಿಕೊಳ್ಳುತ್ತಿದ್ದಾರೆ.

Share This Article