ಸೋಷಿಯಲ್ ಮೀಡಿಯಾದಲ್ಲಿ ಹಿಂದುತ್ವದ ಬಗ್ಗೆ ಪೋಸ್ಟ್ ಮಾಡಿ ಜೈಲು ಪಾಲಾಗಿದ್ದ ಚೇತನ್ (Chetan Ahimsa), ಇಂದು ಜೈಲಿನ (Jail) ದಿನಗಳನ್ನು ನೆನಪು ಹಾಕಿದ್ದಾರೆ. ಜೊತೆಗೆ ಜೈಲಿನಲ್ಲಿ ಪರಿಚಯವಾಗಿದ್ದ ಗೆಳೆಯನನ್ನು ಪರಿಚಯಿಸಿ, ಆ ಗೆಳೆಯನ (friend) ದುಃಖದ ವಾರ್ತೆಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಚೇತನ್ ತಮ್ಮ ಮಾನವೀಯ ಮತ್ತೊಂದು ಗುಣವನ್ನು ಜಗತ್ತಿಗೆ ತೋರ್ಪಡಿಸಿದ್ದಾರೆ.
ನಟ ಚೇತನ್ ಜೈಲಿನಲ್ಲಿದ್ದಾಗ ಪರಿಚಯವಾದವರು ಶಾಂತಪ್ಪ (Shantappa) ಎನ್ನುವವರು. ಶಾಂತಪ್ಪ ಹಾಡುಗಾರ ಕೂಡ. ಅದರಲ್ಲೂ ಒಳಿತು ಮಾಡು ಮನುಸ ಗೀತೆಯನ್ನು ಸೊಗಸಾಗಿ ಹಾಡುತ್ತಿದ್ದರಂತೆ. ಚೇತನ್ ಆ ಹಾಡುಗಳನ್ನು ಕೇಳುತ್ತಾ ದಿನಗಳನ್ನು ಕಳೆಯುತ್ತಿದ್ದರಂತೆ. ಇಂದು ಶಾಂತಪ್ಪ ಇಲ್ಲವಾಗಿದ್ದಾರೆ (Death)ಎನ್ನುವ ದುಃಖವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ
ಶಾಂತಪ್ಪನ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಚೇತನ್, ‘ಇಂದು ದುಃಖದ ದಿನ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವಾರದಲ್ಲಿ ನನ್ನ ಆತ್ಮೀಯ ಗೆಳೆಯನಾಗಿದ್ದ ಶಾಂತಪ್ಪ (35) ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷದಿಂದ ಅವರ ಕುಟುಂಬದ ಸದಸ್ಯ ಆನಂದ ಮತ್ತು ನಾನು ವೈದ್ಯಕೀಯವಾಗಿ ಮತ್ತು ದಿನನಿತ್ಯದ ಜೀವನಾಂಶಕ್ಕಾಗಿ ಅವರಿಗೆ ಬೆಂಬಲ ನೀಡುತ್ತಿದ್ದೇವು. ಶಾಂತಪ್ಪ ನನ್ನ ಹೃದಯದಲ್ಲಿ ಉಳಿಯುತ್ತಾರೆ’ ಎಂದು ಬರೆದುಕೊಂಡಿದ್ದಾರೆ.