ನಿವೇದಿತಾ ಹುಟ್ಟುಹಬ್ಬಕ್ಕೆ ಚಂದನ್ ಶೆಟ್ಟಿ ಕಡೆಯಿಂದ ದುಬಾರಿ ಗಿಫ್ಟ್

Public TV
2 Min Read
niveditha gowda

ಬಿಗ್ ಬಾಸ್ ಶೋ (Bigg Boss Kannada) ಮೂಲಕ ಮನೆ ಮಾತಾದ ನಿವೇದಿತಾ ಗೌಡ (Niveditha Gowda) ಅವರು ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನು(Birthday)  ಆಚರಿಸಿಕೊಂಡಿದ್ದಾರೆ. ಬರ್ತ್‌ಡೇ 2 ದಿನ ಮುಂಚಿತವಾಗಿಯೇ ವಿಶೇಷ ಗಿಫ್ಟ್ (Gift) ಸಹ ನೀಡಿದ್ದಾರೆ. ಪತ್ನಿಗೆ ರೊಮ್ಯಾಂಟಿಕ್ ಆಗಿ ಚಂದನ್ ವಿಶ್ ಮಾಡಿದ್ದಾರೆ.

niveditha gowda

ನಿವೇದಿತಾ ಗೌಡ (Niveditha Gowda) ಅವರು ಟಿಕ್ ಟಾಕ್ ಮೂಲಕ ಜನಪ್ರಿಯತೆ ಪಡೆದು ದೊಡ್ಮನೆಗೆ ಕಾಲಿಟ್ಟ ನಟಿ, ಬಳಿಕ ಚಂದನ್ ಶೆಟ್ಟಿ ಜೊತೆ ಪ್ರೇಮಾಂಕುರವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಂದನ್, ತಮ್ಮ ಸಂಗೀತ ಸಂಯೋಜನೆಯಿಂದ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡ್ತಿದ್ರೆ, ನಿವಿ ‘ಗಿಚ್ಚಿ ಗಿಲಿ ಗಿಲಿ ಶೋ’ ಮೂಲಕ ಸದ್ದು ಮಾಡ್ತಿದ್ದಾರೆ.

Niveditha Gowda

ಪತ್ನಿ ಹುಟ್ಟುಹಬ್ಬದ ಪ್ರಯುಕ್ತ 58 ಲಕ್ಷ ರೂಪಾಯಿಯ ಟೊಯೊಟಾ ಫಾರ್ಚುನರ್ ಲೆಜೆಂಡರ್ ಕಾರ್‌ ಚಂದನ್ ಖರೀದಿಸಿದ್ದಾರೆ. ಪತ್ನಿ ಮತ್ತು ತಾಯಿಯ ಜೊತೆ ದೇವಸ್ಥಾನಕ್ಕೆ ತೆರಳಿ ಕಾರಿಗೆ ಪೂಜೆ ಮಾಡಿಸಿದ್ದಾರೆ. ಮೇ 12ರಂದು ಪತ್ನಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

ಹುಟ್ಟುಹಬ್ಬದ ಶುಭಾಶಯಗಳು. ಇಂದು ನೀನು ನಿನ್ನ ಜನ್ಮದಿನ ಆಚರಿಸುತ್ತಿರುವೆ, ನಿನಗೆ ಒಳ್ಳೆಯದಾಗಲಿ ಎಂದು ಬಯಸುವೆ. ನಾನು ನನ್ನ ಜೀವನದಲ್ಲಿ ಭೇಟಿ ಆಗಿರುವ ಅದ್ಭುತ, ಸುಂದರವಾದ ವ್ಯಕ್ತಿ ನೀನು. ನಿನ್ನನ್ನು ನನ್ನ ಜೀವನದಲ್ಲಿ ಪಡೆದಿರೋದಿಕ್ಕೆ ತುಂಬ ಪುಣ್ಯ ಮಾಡಿದ್ದೇನೆ. ನಿನ್ನ ನಗು ನನ್ನ ಜೀವನವನ್ನು ಬೆಳಕಾಗಿಸುತ್ತದೆ, ನಿನ್ನ ನಗು ನನ್ನ ಹೃದಯಕ್ಕೆ ಸಂತೋಷ ನೀಡುವುದು. ನಿನ್ನ ಪ್ರೀತಿ ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ಶಕ್ತಿ ನೀಡುತ್ತದೆ. ಈ ವಿಶೇಷ ದಿನ ನಾನು ನಿನಗೆ ತುಂಬ ಪ್ರೀತಿ ಕೊಡ್ತೀನಿ, ನಾವು ಒಟ್ಟಾಗಿ ಕಳೆದ ಸಮಯವನ್ನೆಲ್ಲ ನೆನಪಿಸಿಕೊಂಡು ಸಂಭ್ರಮಿಸೋಣ. ನಿನ್ನ ಕನಸುಗಳು ಈಡೇರಲಿ, ಖುಷಿ, ನಗುವಿನ ಜೊತೆ ಬಾಳು. ನನ್ನ ಸುಂದರ ಪತ್ನಿಗೆ ಹುಟ್ಟುಹಬ್ಬದ ಶುಭಾಶಯಗಳು. ಪದಗಳಲ್ಲಿ ಹೇಳಲಾಗದಷ್ಟು ನಾನು ನಿನ್ನ ಪ್ರೀತಿಸುವೆ ಎಂದು ಬರೆದುಕೊಂಡಿದ್ದಾರೆ. ಚಂದನ್ ಪದಗಳಿಗೆ ನಿವಿ ಫಿದಾ ಆಗಿದ್ದಾರೆ. ಧನ್ಯವಾದಗಳು ‘ಐ ಲವ್ ಯೂ’ ಎಂದು ನಿವಿ ಕಾಮೆಂಟ್ ಮೂಲಕ ರಿಯಾಕ್ಟ್ ಮಾಡಿದ್ದಾರೆ.

Share This Article