ಬಾಲಿವುಡ್ (Bollywood) ಬ್ಯೂಟಿ ದಿಶಾ ಪಟಾನಿ (Disha Patani) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಟ್ರೋಲ್ (Troll) ವಿಚಾರವಾಗಿಯೇ ಸದ್ದು ಮಾಡುತ್ತಾರೆ. ಇದೀಗ ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.
ನಟಿ ದಿಶಾ ಭಾಘಿ 2, ಭಾಘಿ 3 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಿಂದ ಬಿಗ್ ಸಕ್ಸಸ್ ಸಿಗದೇ ಇದ್ದರೂ, ಇವರಿಗಿರುವ ಬೇಡಿಕೆ ಕಮ್ಮಿಯಾಗಿಲ್ಲ. ಆಗಾಗ ಹಾಟ್ ಫೋಟೋಗಳ ಮೂಲಕ ಪಡ್ಡೆಹುಡುಗರ ನಿದ್ದೆ ಕದಿದ್ದಾರೆ.
View this post on Instagram
ಸದಾ ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ಟ್ರೋಲ್ ಆಗ್ತಿದ್ದ ದಿಶಾ ಇದೀಗ ತನ್ನ ಮುಖದಿಂದಾಗಿ ಟ್ರೋಲ್‌ಗೆ ಒಳಗಾಗಿದ್ದಾರೆ. ಇದೀಗ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ ದಿಶಾ ಮುಖ ಊದಿಕೊಂಡಿರುವ ಹಾಗೇ ಬಂದಿದೆ. ಚಿತ್ರರಂಗಕ್ಕೆ ಬಂದಾಗ ಇದ್ದ ಲುಕ್‌ಗೂ ಇದೀಗ ಇರೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ದಿಶಾ ಕ್ಲೋಸ್ ಅಪ್ ಫೋಟೋಗಳು ಟ್ರೋಲ್‌ಗೆ ಆಹಾರವಾಗಿದೆ. ಇದನ್ನೂ ಓದಿ:ಲವರ್‌ಗಾಗಿ ಕವಿತೆ ಬರೆದ ‘ಗಟ್ಟಿಮೇಳ’ ನಟಿ ನಿಶಾ? ಹುಡುಗ ಯಾರು?
ದಿಶಾ ಇತ್ತ ಫೋಟೋ ಶೇರ್ ಮಾಡ್ತಿದ್ದಂತೆ ನೆಟ್ಟಿಗರು, ನಿಮ್ಮ ಮುಖ ಜೇನು ನೋಣ ಕಚ್ಚಿದ್ದಂತೆ ಕಾಣಿಸುತ್ತಿದೆ ಎಂದಿದ್ದಾರೆ. ನಿಮ್ಮ ಇಡೀ ಮುಖಕ್ಕೆ ಎಷ್ಟು ಸಲ ಸರ್ಜರಿ ಮಾಡಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ನಲ್ಲಿ ದಿಶಾ ಊದಿಕೊಂಡಿರುವ ಮುಖ ಫೋಟೋ ಎಲ್ಲೆಡೆ ಸದ್ದು ಮಾಡ್ತಿದೆ.