ಬೆಂಗಳೂರು: ಮನೆಯಲ್ಲೇ ಇದ್ದ ಮಗುವಿಗಾಗಿ ಪೊಲೀಸರ ಜೊತೆ ಫೋಷಕರು ಊರೆಲ್ಲಾ ಹುಡುಕಾಡಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೆ.ಆರ್.ಪುರದ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮೀನಾ ದಂಪತಿ ಮನೆಯಲ್ಲೇ ಇದ್ದ ತಮ್ಮ 6 ವರ್ಷದ ಮಗಳಿಗಾಗಿ ಊರೆಲ್ಲಾ ಹುಡುಕಿದ್ದಾರೆ. ಕೊನೆಗೆ ಮನೆಗೆ ವಾಪಸ್ ಬಂದಾಗ ಮಗು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಶಾಲೆಯ ಗುಮಾಸ್ತನಿಂದ 4ರ ಬಾಲಕಿಗೆ ಕಿರುಕುಳ
ನಡೆದಿದ್ದೇನು?
ನನ್ನ ಮಗು ಕಿಡ್ನ್ಯಾಪ್ ಆಗಿದೆ ಎಂದು ಕೆ.ಆರ್.ಪುರ ಪೊಲೀಸ್ ಠಾಣೆಗೆ ಮೀನಾ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹುಡುಕಾಟ ಆರಂಭಿಸಿದರು. ಪೊಲೀಸರ ಜೊತೆ ಮಗಳಿಗಾಗಿ ಪೋಷಕರು ಅಕ್ಕಪಕ್ಕದ ಏರಿಯಾಗಳಲ್ಲೆಲ್ಲಾ ಹುಡುಕಾಟ ನಡೆಸಿದ್ದರು.
ಕೊನೆಗೆ ಮಗು ಸಿಗಲಿಲ್ಲ ಎಂಬ ಆತಂಕದಲ್ಲೇ ಪೋಷಕರು ಮನೆಗೆ ವಾಪಸ್ ಆಗಿದ್ದಾರೆ. ಈ ವೇಳೆ ಮನೆಯಲ್ಲೇ ಮಗು ನಿದ್ದೆ ಮಾಡುತ್ತಿರುವುದು ಅವರಿಗೆ ತಿಳಿದುಬಂದಿದೆ. ಮನೆಯಲ್ಲಿ ಗುಡ್ಡೆ ಹಾಕಿದ್ದ ಬಟ್ಟೆಗಳ ಅಡಿಯಲ್ಲಿ ತಮ್ಮ ಮಗಳು ಮಲಗಿರುವುದನ್ನು ಕಂಡು ಮೀನಾ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: 25 ದಿನಗಳಲ್ಲಿ 4.12 ಲಕ್ಷ ಕೇಸ್, 22.89 ಕೋಟಿ ದಂಡ – ರಾಜಕೀಯ ನಾಯಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸ್