ನೀವೊಮ್ಮೆ ಟ್ರೈ ಮಾಡ್ಲೇ ಬೇಕು ಪೋಡಿ ಇಡ್ಲಿ

Public TV
2 Min Read
podi idli 2

ಕ್ಷಿಣ ಭಾರತದ ಅತ್ಯಂತ ಜನಪ್ರಿಯ ಉಪಾಹಾರ ಇಡ್ಲಿ. ಸಾಂಪ್ರದಾಯಿಕ ಇಡ್ಲಿಗೆ ವಿವಿಧ ರೀತಿಯ ಮಸಾಲೆ ಹಾಗೂ ತರಕಾರಿಗಳನ್ನು ಬಳಸಿ ಇನ್ನಷ್ಟು ರುಚಿಕರವನ್ನಾಗಿ ಮಾಡಲಾಗುತ್ತದೆ. ನಾವಿಂದು ಹೇಳಿಕೊಡುತ್ತಿರೋ ಪೋಡಿ ಇಡ್ಲಿಯೂ ಅಂತಹುದೇ. ಸಾಂಪ್ರದಾಯಿಕ ಇಡ್ಲಿಯನ್ನು ಮಸಾಲೆಯುಕ್ತ ಒಗ್ಗರಣೆಗೆ ಹಾಕಿ ಸ್ವಲ್ಪ ಫ್ರೈ ಮಾಡಿದರೆ ಪೋಡಿ ಇಡ್ಲಿ ಸುಲಭವಾಗಿ ತಯಾರಾಗುತ್ತದೆ. ಈ ವಿಧಾನ ಮಾಡಿದರೆ ಚಟ್ನಿ ಅಥವಾ ಸಾಂಬಾರ್‌ನ ಅಗತ್ಯವಿರುವುದಿಲ್ಲ. ರುಚಿಕರವಾದ ಈ ಉಪಾಹಾರವನ್ನು ಮನೆಮಂದಿ ಇಷ್ಟಪಟ್ಟು ಸವಿಯುತ್ತಾರೆ. ಪೋಡಿ ಇಡ್ಲಿ ಮಾಡೋದು ಹೇಗೆಂದು ನೋಡೋಣ.

podi idli

ಬೇಕಾಗುವ ಪದಾರ್ಥಗಳು:
ಕಡಲೆಕಾಯಿ – 2 ಟೀಸ್ಪೂನ್
ಕಡಲೆ ಬೇಳೆ – 1 ಟೀಸ್ಪೂನ್
ಉದ್ದಿನ ಬೇಳೆ – 1 ಟೀಸ್ಪೂನ್
ಒಣ ಕೆಂಪು ಮೆಣಸು – 3
ಎಳ್ಳು – ಒಂದೂವರೆ ಟೀಸ್ಪೂನ್
ಒಣ ಕೊಬ್ಬರಿ – ಒಂದೂವರೆ ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ಹುಣಿಸೆಹಣ್ಣು – ಕಾಲು ಟೀಸ್ಪೂನ್
ಬೆಲ್ಲ – ಕಾಲು ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಸಾದಾ ಇಡ್ಲಿಗಳು – ಸುಮಾರು 10
ತುಪ್ಪ – 2 ಟೀಸ್ಪೂನ್
ಸಾಸಿವೆ – ಕಾಲು ಟೀಸ್ಪೂನ್  ಇದನ್ನೂ ಓದಿ: ಫಿಶ್ ಫ್ರೈನಂತೆ ರುಚಿಕರ ಬಾಳೆಕಾಯಿ ರವಾ ಫ್ರೈ ಮಾಡಿ

podi idli 1

ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು ಕಡಲೆಕಾಯಿ ಹಾಗೂ ಒಣ ಕೆಂಪು ಮೆಣಸನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
* ಬಳಿಕ ಕಡಲೆ ಬೇಳೆ ಹಾಗೂ ಉದ್ದಿನ ಬೇಳೆಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಹುರಿದುಕೊಳ್ಳಿ.
* ಬಳಿಕ ಎಳ್ಳು, ಒಣ ಕೊಬ್ಬರಿ, ಜೀರಿಗೆ, ಕರಿಬೇವಿನ ಸೊಪ್ಪು ಸೇರಿಸಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ.
* ಈಗ ಹುರಿದ ಎಲ್ಲಾ ಪದಾರ್ಥಗಳನ್ನು ತಣ್ಣಗಾಗಲು ಬಿಟ್ಟು ಬಳಿಕ ಮಿಕ್ಸರ್ ಜಾರಿಗೆ ಹಾಕಿ, ಹುಣಿಸೆಹಣ್ಣು, ಬೆಲ್ಲ ಹಾಗೂ ಉಪ್ಪು ಸೇರಿಸಿ ಪುಡಿ ಮಾಡಿಕೊಳ್ಳಿ.
* ಈಗ ಒಂದು ಕಡಾಯಿ ತೆಗೆದುಕೊಂಡು ಅದರಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ಸಾಸಿವೆ ಸಿಡಿಯಲು ಬಿಡಿ.
* ಬಳಿಕ ಇಡ್ಲಿಗಳನ್ನು ಅದರಲ್ಲಿ ಹಾಕಿ ಉರಿಯನ್ನು ಆಫ್ ಮಾಡಿ.
* ಈಗ ಪುಡಿ ಮಾಡಿಟ್ಟಿದ್ದ ಮಸಾಲೆಯನ್ನು ಇಡ್ಲಿಗಳ ಮೇಲೆ ಹರಡಿ ಟಾಸ್ ಮಾಡಿ.
* ಇಡ್ಲಿಗೆ ಮಸಾಲೆ ಚೆನ್ನಾಗಿ ಕೋಟ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಇದೀಗ ಮಸಾಲೆಯುಕ್ತ ಪೋಡಿ ಇಡ್ಲಿ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಟ್ರೈ ಮಾಡಿ ಕ್ರಿಸ್ಪಿ ಪೋಹಾ ಕಟ್ಲೆಟ್..

Share This Article