Charishma Kaliyanda: ಆಸ್ಟ್ರೇಲಿಯಾ ಸಂಸದೆಯಾಗಿ ಕೊಡಗಿನ ಚರಿಷ್ಮಾ ಪ್ರಮಾಣ ವಚನ ಸ್ವೀಕಾರ

Public TV
1 Min Read
Charishma Kaliyanda

ಮಡಿಕೇರಿ: ಪ್ರಪಂಚದಾದ್ಯಂತ ಭಾರತೀಯರು ಉದ್ಯೋಗ, ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ನೋಡುತ್ತಿದ್ದೇವೆ. ವಿದೇಶಗಳಲ್ಲಿ ಸಾಮಾನ್ಯ ಉದ್ಯೋಗಿಯಿಂದ ಪ್ರಧಾನಿವರೆಗೂ ಭಾರತೀಯ ಮೂಲದವರನ್ನು ಕಾಣಬಹುದು. ಅದೇ ಸಾಲಿನಲ್ಲಿ ಇದೀಗ ಕೊಡಗಿನ ಕುವರಿ ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ (NSW MP) ಆಯ್ಕೆಯಾಗಿದ್ದಾರೆ.

Charishma Kaliyanda 1

ವಿದೇಶದಲ್ಲಿ ಸಂಸದೆಯಾಗಿರುವ ಚರಿಷ್ಮಾ (Charishma Kaliyanda) ಅವರು ಕೊಡಗು (Kodagu) ಮೂಲದವರು. ಕೊಡಗಿನ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಈ ಬಾರಿ ದಾಖಲೆ ಮತದಾನ – ನಿಮ್ಮ ಜಿಲ್ಲೆಯಲ್ಲಿ ಎಷ್ಟು ವೋಟ್‌?

ವಿದೇಶದಲ್ಲಿ ಕರುನಾಡ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಎಲ್ಲರ ಕಣ್ಮನ ಸೆಳೆಯುತ್ತಿದೆ. ಮೂಲತಃ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಕಲಿಯಂಡ ಚರಿಷ್ಮಾ ಆಸ್ಟ್ರೇಲಿಯಾದ ಲಿವರ್ ಪೂಲ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

ವಿದೇಶದಲ್ಲಿ ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಕನ್ನಡಿಗರ ಮನ ಗೆದ್ದಿದ್ದಾರೆ. ಅಷ್ಟೇ ಅಲ್ಲದೇ ಕೊಡಗಿನ ಸಂಸ್ಕೃತಿ‌ ಬಿಂಬಿಸುವ ಸಾಂಪ್ರದಾಯಿಕ ಉಡುಗೆ ತೊಟ್ಟು ಕೊಡಗಿನ ಸಂಸ್ಕೃತಿಯನ್ನು ಆಸ್ಟ್ರೇಲಿಯಾದಲ್ಲಿ ಬಿಂಬಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ 7ಕ್ಕೆ 7ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ: ಪುಟ್ಟರಾಜು

Share This Article