ರಿಸಲ್ಟ್ ತನಕ ಮಾತ್ರ ಕಾಂಗ್ರೆಸ್‍ನವರ ಉತ್ಸಾಹ, ಆಮೇಲೆ ಬಿಜೆಪಿಯ ಉತ್ಸಾಹ: ಬಿಸಿ ಪಾಟೀಲ್

Public TV
1 Min Read
BC PATIL

ಹಾವೇರಿ: ರಾಜ್ಯದಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರ ಕ್ಕೆ ಬರಲಿದೆ. ರಿಸಲ್ಟ್ ತನಕ ಮಾತ್ರ ಕಾಂಗ್ರೆಸ್‍ನ (Congress) ಉತ್ಸಾಹ ಆಮೇಲೆ ಬಿಜೆಪಿಯ (BJP) ಉತ್ಸಾಹವನ್ನು ರಾಜ್ಯ ನೋಡಲಿದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ (B.C Patil) ಹೇಳಿದ್ದಾರೆ.

ಚುನಾವಣೋತ್ತರ ಸಮೀಕ್ಷೆಯಲ್ಲಿ (Exit Poll) ಕೆಲವರು ಬಿಜೆಪಿ, ಕೆಲವರು ಕಾಂಗ್ರೆಸ್ ಲೀಡ್ ಎನ್ನುತ್ತಿದ್ದಾರೆ. ಅಂತಿಮವಾಗಿ ಮತದಾರರ ತೀರ್ಪು ಮೇಲಾಗಲಿದೆ. ಈ ಬಾರಿ ರಾಜ್ಯದಲ್ಲಿ ಅತಂತ್ರ ಆಗುವುದಿಲ್ಲ. ಸ್ಪಷ್ಟ ಬಹುಮತದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‍ನವರ ಸಂಭ್ರಮ ಕೂಸು ಹುಟ್ಟುವ ಮುನ್ನ ಕೂಲಾಯಿ ಹೊಲಿಸಿದರು ಎನ್ನುವ ಹಾಗೆ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ ಕಾಲ ಕಳೆಯಿರಿ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಸಲಹೆ

ಹಿರೇಕೆರೂರು (Hirekerur) ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸಗಳು ನನ್ನ ಕೈ ಹಿಡಿದಿವೆ. ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಸುಮಾರು 25 ಸಾವಿರ ಲೀಡ್ ನಿಂದ ಗೆಲ್ಲುವ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನಾವು ಮ್ಯಾಚ್ ಆಡೋಕೆ ಬಂದಿದ್ದೀವಿ, ಆಡಿ ಗೆಲ್ತೀವಿ: ಆರ್ ಅಶೋಕ್

Share This Article