ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಮದುವೆ ಸುದ್ದಿ ಸದ್ಯ ಬಿಟೌನ್ ಅಂಗಳದಲ್ಲಿ ಸದ್ದು ಮಾಡ್ತಿದೆ. ಅದ್ದೂರಿ ಎಂಗೇಜ್‌ಮೆಂಟ್‌ಗೆ ಯಾರೆಲ್ಲಾ ಭಾಗಿಯಾಗ್ತಿದ್ದಾರೆ? ಪರಿಣಿತಿ ಜೋಡಿ ಔಟ್‌ಫಿಟ್ ಲುಕ್ ಹೇಗಿರಲಿದೆ ಎಂಬುದರ ಡಿಟೈಲ್ಸ್ ಇಲ್ಲಿದೆ.
ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಕಿಯಾರಾ- ಸಿದ್ ಮದುವೆ ನಂತರ ಪರಿಣಿತಿ ಚೋಪ್ರಾ ಮದುವೆ ಸಂಭ್ರಮ ಬಾಲಿವುಡ್ ರಂಗದಲ್ಲಿ ಮನೆ ಮಾಡಿದೆ. ಪ್ರಿಯಾಂಕಾ ಚೋಪ್ರಾ (Priyanka Chopra) ಸಹೋದರ ಸಂಬಂಧಿ ಪರಿಣಿತಿ ಅವರು ಸಿನಿಮಾಗೆ ಬ್ರೇಕ್ ಹಾಕಿ, ವೈಯಕ್ತಿಕ ಜೀವನದತ್ತ ಗಮನ ಕೊಡುತ್ತಿದ್ದಾರೆ.
ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ಇದೇ ಮೇ 13ಕ್ಕೆ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಪರಿಣಿತಿ -ರಾಘವ್ ಎಂಗೇಜ್‌ಮೆಂಟ್ (Engagement) ನಡೆಯುತ್ತಿದೆ. 2 ಕುಟುಂಬದಿಂದ 150 ಜನರಷ್ಟೇ ಭಾಗಿಯಾಗುತ್ತಿದ್ದಾರೆ. ಪರಿಣಿತಿ, ಮನೀಷ್ ಮಲ್ಹೋತ್ರಾ ಬಳಿ ಸರಳವಾಗಿ ಡ್ರೆಸ್ ಮಾಡಿಸಿದ್ದಾರೆ. ರಾಘವ್, ಅವರ ಚಿಕ್ಕಪ್ಪ ಪವನ್ ಸಚ್‌ದೇವ್ ಬಳಿ ನಿಶ್ಚಿತಾರ್ಥಕ್ಕೆ ಔಟ್ ಫಿಟ್ ಡಿಸೈನ್ ಮಾಡಿಸಲಾಗಿದೆ. ಇದನ್ನೂ ಓದಿ:ಯಶ್ 19 ಅಲ್ಲ, ಯಶ್ 37 : ಜೋಕ್ ಮಾಡಿ ಹೊರಟೇ ಬಿಟ್ಟ ಯಶ್
ನಟಿ ಪರಿಣಿತಿ(Parineeti Chopra), ರಾಜಕಾರಣಿ ರಾಘವ್ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ದಂಪತಿ, ಆಲಿಯಾ ಭಟ್, ಕತ್ರಿನಾ ಕೈಫ್, ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸಿನಿಮಾ ಸ್ಟಾರ್‌ಗಳು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.



