ಯಶ್ 19 ಅಲ್ಲ, ಯಶ್ 37 : ಜೋಕ್ ಮಾಡಿ ಹೊರಟೇ ಬಿಟ್ಟ ಯಶ್

Public TV
1 Min Read
yash 1 6

ರಾಕಿಂಗ್ ಸ್ಟಾರ್ ಯಶ್ (Yash) ಮಾಧ್ಯಮಗಳ ಕಣ್ಣಿಗೆ ಬೀಳುವುದು ಅಪರೂಪವಾಗಿಬಿಟ್ಟಿದೆ. ಕೆಜಿಎಫ್ 2 (KGF 2) ಚಿತ್ರದ ಯಶಸ್ಸಿನ ನಂತರ ಅವರು ಮಾಧ್ಯಮಗಳ ಕಣ್ಣಿಗೆ ಬೀಳುವುದು ಕಡಿಮೆಯಾಗಿದೆ. ಏನಾದರೂ ಹೇಳುವುದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಣ್ಣಗಾಗಿ ಬಿಡ್ತಾರೆ. ಹಾಗಾಗಿ ಯಶ್ ಅವರ ಮುಂದಿನ ಸಿನಿಮಾ (New Movie) ಅಂದರೆ, 19ನೇ ಸಿನಿಮಾದ ಬಗ್ಗೆ ಈವರೆಗೂ ಯಾವುದೇ ಅಪ್ ಡೇಟ್ ಸಿಕ್ಕಿಲ್ಲ.

Yash 2

ನಿನ್ನೆಯಷ್ಟೇ ಯಶ್ ಮತದಾನ ಮಾಡಲು ಹೊಸಕೆರೆಹಳ್ಳಿಗೆ ಬಂದಿದ್ದರು. ಯಶ್ ಬರುವುದನ್ನೇ ಕಾಯುತ್ತಿದ್ದ ಮಾಧ್ಯಮಗಳು ಇವತ್ತಾದರೂ ತಮ್ಮ ಮುಂದಿನ ಸಿನಿಮಾ ಬಗ್ಗೆ ಏನಾದರೂ ಮಾತನಾಡುತ್ತಾರೆ ಎನ್ನುವ ನಂಬಿಕೆ ಮಾಧ್ಯಮ ಮಿತ್ರರದ್ದಾಗಿತ್ತು. ಅಲ್ಲಿಯೂ ನುಣಿಚಿಕೊಂಡು ಬಿಟ್ಟರು ಯಶ್. ಅದು ಜಾಣ್ಮೆಯಿಂದ ಉತ್ತರ ನೀಡಿ, ಅಲ್ಲಿಂದ ಹೊರಟೇ ಬಿಟ್ಟರು. ಇದನ್ನೂ ಓದಿ:ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ‌’ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್

Geethu Mohan Das with yash

ಯಶ್ ಮತದಾನ ಮಾಡಿ ಬೂತ್ ನಿಂದ ಆಚೆ ಬರುತ್ತಿದ್ದಂತೆಯೇ ಮತದಾನದ ಬಗ್ಗೆ ಪ್ರಶ್ನೆಗಳನ್ನು ಮಾಡಲಾಯಿತು. ಆನಂತರ ಯಶ್ 19 ಸಿನಿಮಾ ಬಗ್ಗೆ ಏನು ಹೇಳ್ತೀರಿ ಅಂದರು ಮಾಧ್ಯಮದವರು. ನಗುತ್ತಲೇ ಕ್ಯಾಮೆರಾದತ್ತ ನೋಡಿದ ಯಶ್, ‘ಯಶ್ 19 (Yash 19) ಅಲ್ಲ, ಯಶ್ ವಯಸ್ಸು 37’ ಎಂದು ಅಲ್ಲಿಂದ ಹೊರಟೇ ಬಿಟ್ಟರು. ಅಲ್ಲಿಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಮತ್ತೆ ಯಾವುದೇ ಅಪ್ ಡೇಟ್ ಸಿಗಲಿಲ್ಲ.

Yash 3

ಯಶ್ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಗೌಪ್ಯತೆಯನ್ನು ಕಾಪಾಡುತ್ತಿದ್ದಾರೆ. ಆದರೂ, ಒಂದಷ್ಟು ವಿಷಯಗಳು ಸೋರಿಕೆ ಆಗಿವೆ. ಅವರು ಮುಂದಿನ ಸಿನಿಮಾವನ್ನು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲಿದ್ದಾರಂತೆ. ಮಲಯಾಳಂ ನಿರ್ದೇಶಕಿಯೇ ಅವರ ಮುಂದಿನ ಚಿತ್ರದ ನಿರ್ದೇಶಕಿ ಎಂದು ಹೇಳಲಾಗುತ್ತಿದೆ. ಇವೆಲ್ಲದಕ್ಕೂ ಅವರೇ ಉತ್ತರ ನೀಡಬೇಕು.

Share This Article