ಈ ಸಲ ಯಾವ ಪಾರ್ಟಿ ಬರಬಹುದು? : ಉತ್ತರ ಕೊಟ್ಟ ನಿರ್ದೇಶಕ ಯೋಗರಾಜ್ ಭಟ್

Public TV
2 Min Read
yogaraj bhat 3

ನಿನ್ನೆಯಷ್ಟೇ ಕರ್ನಾಟಕ ವಿಧಾನಸಭೆ (Assembly) ಚುನಾವಣೆ (Election) ಮುಗಿದಿದೆ. ಎಕ್ಸಿಟ್ ಪೋಲ್ ಗಳು ತೆಲೆ ತಿರುಗುವಂತಹ ಲೆಕ್ಕಾಚಾರವನ್ನು ನೀಡಿವೆ. ಯಾವ ಪಾರ್ಟಿ ಗೆಲ್ಲಬಹುದು, ಯಾರು ಅಧಿಕಾರ ಚುಕ್ಕಾಣೆ ಹಿಡಿಯಬಹುದು, ಮುಖ್ಯ ಮಂತ್ರಿ ಯಾರಾಗಬಹುದು, ಸ್ಪಷ್ಟ ಬಹುಮತ ಬರತ್ತಾ? ಹೀಗೆ ಹತ್ತಾರು ಪ್ರಶ್ನೆಗಳು ಜನರ ನಿದ್ದೆಗೆಡಿಸಿವೆ. ಎಕ್ಸಿಟ್ ಪೋಲ್ ನಂತರ ಆಯಾ ಪಕ್ಷಗಳ ನಾಯಕರು ಒಂದೊಂದು ರೀತಿಯಲ್ಲಿ ಉತ್ತರ ನೀಡುತ್ತಿದ್ದಾರೆ. ಆದರೆ, ನಿರ್ದೇಶಕ ಯೋಗರಾಜ್ ಭಟ್ (Yograj Bhat) ಕೊಟ್ಟ ಉತ್ತರವೇ ಬೇರೆಯಾಗಿದೆ.

yogaraj bhat 2

ಮತದಾನ ಮುಗಿಯುತ್ತಿದ್ದಂತೆಯೇ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ವಿಡಿಯೋವೊಂದನ್ನು ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆ ಮತ್ತು ಆಕೆಯ ಪುತ್ರಿ ಯೋಗರಾಜ್ ಭಟ್ಟರಿಗೆ ಹತ್ತಾರು ಪ್ರಶ್ನೆಗಳನ್ನು ಮಾಡಿದ್ದಾರೆ. ಜೊತೆಗೆ ಈ ಸಲ ಯಾವ ಪಾರ್ಟಿ ಅಧಿಕಾರಕ್ಕೆ (Victory) ಬರಬಹುದು ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ. ಆ ಪ್ರಶ್ನೆಗೆ ಭಟ್ಟರು ನೀಡಿದ ಉತ್ತರವೇ ಮಜವಾಗಿದೆ. ಇದನ್ನೂ ಓದಿ: ಸಲಿಂಗ ವಿವಾಹ ಕಾನೂನು ಮಾನ್ಯತೆ ವಿಚಾರಣೆ – ಸಿಜೆಐ ಹಿಂದೆ ಸರಿಯುವಂತೆ ಸಲ್ಲಿಸಿದ್ದ ಮನವಿ ತಿರಸ್ಕೃತ

FotoJet 5

ಮಹಿಳೆಯೊಬ್ಬರು ಸರ್ ವೋಟ್ ಹಾಕಿದ್ರಾ? ಎಂಬ ಪ್ರಶ್ನೆಯೊಂದಿಗೆ ಶುರುವಾಗುವ ವಿಡಿಯೋ, ನಿಮ್ಮದು ಯಾವ ಪಕ್ಷ, ನೀವು ಯಾರ ಪರ? ಸಿನಿಮಾದ ಕೆಲವರು ಪ್ರಚಾರಕ್ಕೆ ಹೋದರು ನೀವು ಯಾಕೆ ಹೋಗಲಿಲ್ಲ ಹೀಗೆ ಹಲವು ಪ್ರಶ್ನೆಗಳನ್ನು ಭಟ್ಟರಿಗೆ ಕೇಳಲಾಗಿದೆ. ಕೊನೆಗೆ ಯಾವ ಪಾರ್ಟಿ ಬರಬಹುದು ಅಂತ ನಿಮಗೆ ಅನಿಸತ್ತೆ ಎಂದು ಕೇಳಲಾದ ಪ್ರಶ್ನೆಗೆ ಭಟ್ಟರು ಜಾಣೆಯಿಂದಲೇ ಉತ್ತರಿಸಿದ್ದಾರೆ. ಕ್ರಿಕೆಟ್, ಸಿನಿಮಾ, ಮಕ್ಕಳು ಅಂತ ಕಥೆ ಬೆರೆ ಹೇಳಿದ್ದಾರೆ.

yogaraj bhat 1

ಯಾವ ಪಾರ್ಟಿ ಬರಬಹುದು ಎನ್ನುವ ಪ್ರಶ್ನೆಗೆ ಭಟ್ಟರ ಉತ್ತರ ಹೀಗಿದೆ, ‘ಜಮಾನಾ ಫಾಸ್ಟ್ ಆಗಿದೆ. ಮನುಷ್ಯ ಸ್ಪೀಡ್ ಮಾಡ್ತಾ ಇದಾನೆ. ಮುಂಚೆ 5 ದಿನದ ಟೆಸ್ಟ್ ಕ್ರಿಕೆಟ್ ಇತ್ತು. ಆಮೇಲೆ ಒಂದು ದಿನ ಆಡೋದು ಕಷ್ಟ ಆಯ್ತು. ಈಗ 20 ಓವರ್ ಗೆ ಬಂದಿದೆ. ಮುಂದೆ ಕೇವಲ ಹೈಲೈಟ್ಸ್ ನೋಡೋದು ಬರಬಹುದು. ಮಕ್ಕಳು ಏಳು ತಿಂಗಳಿಗೆ ಹುಟ್ತಿದಾರೆ. ಜನನ ಕೂಡ ಫಾಸ್ಟ್. 3 ಗಂಟೆ ಸಿನಿಮಾದಿಂದ 20 ಸೆಕೆಂಡ್ ರೀಲ್ಸ್ ಗೆ ಬಂದಿದೆ. ಇನ್ನು ಐದು ವರ್ಷಕ್ಕೊಂದು ಎಲೆಕ್ಷನ್. ನಾಲ್ಕೈದು ಜನ ಕುರ್ಚಿ ಮೇಲೆ ಕೂತು ಏಳ್ತಾರೆ. ವರ್ಷಕ್ಕೆ ಒಬ್ಬರು ಕೂರ್ತಾರೆ ಅಂದರೆ ವರ್ಷಕ್ಕೆ ಒಂದು ಎಲೆಕ್ಷನ್ ಲೆಕ್ಕವೇ ಆಯ್ತು. ಕಾಲನೇ ಫಾಸ್ಟ್ ಆಗಿದೆ. ಹೀಗಾಗಿ, ಕಾಲನ ಪ್ರಶ್ನೆ ಮಾಡಬಾರದು’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

Share This Article