ಹಾಸನ: ವಿಧಾನಸಭಾ ಚುನಾವಣೆ (Assembly Election) ದಿನವೇ ತನ್ನ ಮದುವೆಯಿದ್ದರೂ ವರನೊಬ್ಬ (Groom) ಮದುವೆ ಮುಗಿಸಿಕೊಂಡು ಬಂದು ಮತ ಚಲಾಯಿಸಿ (Vote) ಮತಾಭಿಮಾನ ಮೆರೆದಿರುವ ಘಟನೆ ಹಾಸನ (Hassana) ಜಿಲ್ಲೆಯಲ್ಲಿ ನಡೆದಿದೆ.
ನವ ವಿವಾಹಿತ ರೋಹಿತ್ ಧರ್ಮಸ್ಥಳದಲ್ಲಿ ವಿವಾಹವಾಗಿ, ಬಳಿಕ ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಮತಗಟ್ಟೆ 85ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಮಳೆ – ತುಂತುರು ಮಳೆಯಲ್ಲೇ ಮತಗಟ್ಟೆಗೆ ಬಂದ ಮತದಾರ
ರೋಹಿತ್ ಸಕಲೇಶಪುರದ ಮಹೇಶ್ವರಿ ನಗರದ ನಿವಾಸಿ. ಬುಧವಾರ ನಂದಿನಿ ಜೊತೆ ವಿವಾಹವಾದ ರೋಹಿತ್ ತಕ್ಷಣವೇ ಸಕಲೇಶಪುರಕ್ಕೆ ವಾಪಸಾಗಿ ಮತ ಚಲಾಯಿಸಿದ್ದಾರೆ. ನವವಿವಾಹಿತನ ಮತಾಭಿಮಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತದಾನ ಕೇಂದ್ರದ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ