ಹೊಸಕೆರೆಹಳ್ಳಿಯಲ್ಲಿ ಮತದಾನ ಮಾಡಿದ ರಾಕಿಂಗ್ ಸ್ಟಾರ್ ಯಶ್

Public TV
1 Min Read
Yash

ರಾಕಿಂಗ್ ಸ್ಟಾರ್ ಯಶ್ (Yash) ಬೆಂಗಳೂರಿನ ಹೊಸಕೆರೆಹಳ್ಳಿ (Hoskerehalli) ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದರು. ಮತದಾನ (Voting) ವೇಳೆ ಮುಗಿಯುವ ಒಂದೂವರೆ ಗಂಟೆ ಮುಂಚೆ ಮತದಾನ ಕೇಂದ್ರಕ್ಕೆ ಆಗಮಿಸಿದ ಅವರು ತಮ್ಮ ಮತದಾನ ಹಕ್ಕನ್ನು ಚಲಾಯಿಸಿದರು. ಪತ್ನಿ ಬೇರೆ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದ್ದರಿಂದ ಒಬ್ಬರೇ ಬಂದು ವೋಟ್ ಹಾಕಿದರು.

Yash 2

ಈ ಸಂದರ್ಭದಲ್ಲಿ ಮಾತನಾಡಿದ ಯಶ್, ‘ಜನರಿಗೆ ಎಲ್ಲರಿಗೂ ಗೊತ್ತಿದೆ. ವೋಟು ಮಾಡಬೇಕು ಅಂತ. ಮತದಾನ ಎನ್ನುವುದು ನಮ್ಮ ಹಕ್ಕು ಹಾಗೂ ಕರ್ತವ್ಯ. ಹಾಗಾಗಿ ನಾನು ಮಾಡಿದೆ. ಕಳೆದ ಬಾರಿ ಪ್ರಚಾರಕ್ಕೆ ಹೋಗುವುದಕ್ಕೆ ನನ್ನದೇ ಆದ ಕಾರಣವಿತ್ತು. ಯಶೋಮಾರ್ಗದ ಮೂಲಕ ಕೆಲಸ ಮಾಡುತ್ತಿದ್ದೆ.  ಈ ಬಾರಿ ಹೋಗಲು ಆಗಲಿಲ್ಲ. ಅದಕ್ಕೂ ಕಾರಣವಿದೆ’ ಎಂದರು. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್

Yash

ಯುವಕ-ಯುವತಿಯರು ಹೆಚ್ಚಾಗಿ ಮತದಾನ ಮಾಡಿಲ್ಲ ಏಕೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಶ್, ‘ಯಂಗ್ ಸ್ಟರ್ ಅರ್ಥ ಮಾಡಿಕೊಂಡು ವೋಟು ಮಾಡಬೇಕು. ರಾಜಕಾರಣಗಳು ಬೇಸಿಕ್ ಕೆಲಸವನ್ನೇ ಚೆನ್ನಾಗಿ ಮಾಡಿದರೆ ರಾಜ್ಯ ಅಭಿವೃದ್ಧಿ ಆಗುತ್ತದೆ. ಈ ನಿಟ್ಟಿನಲ್ಲಿ ರಾಜಕಾರಣ ನಡೆಯಬೇಕು’ ಎಂದು ಯಶ್ ಮಾತನಾಡಿದರು.

yash 1

ಸಿನಿಮಾ ಕುರಿತಾಗಿ ಈ ಸಂದರ್ಭದಲ್ಲಿ ಯಶ್ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಮುಂದಿನ ದಿನಗಳಲ್ಲಿ ಆ ಕುರಿತು ಮಾತನಾಡುವುದಾಗಿ ಹೇಳಿ ಮತದಾನ ಕೇಂದ್ರದಿಂದ ಹೊರ ನಡೆದರು.

Share This Article